ಗುಂಡ್ಲುಪೇಟೆ: ಜೂಜಾಟದ ಸಾಲಕ್ಕೆ ಯುವಕ ಬಲಿ
ಜೂಜಾಟದ ಸಾಲದ ಬಾಧೆಗೆ ಬೇಸತ್ತು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಚಾಮರಾಜನಗರ: ಜೂಜಾಟದ ಸಾಲದ ಬಾಧೆಗೆ ಬೇಸತ್ತು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ಮಹಮ್ಮದ್ ಇದ್ದೀಸ್(30) ಎಂಬಾತ ಮೃತ ದುರ್ದೈವಿ. ಜೂಜಿಗಾಗಿ ಮಾಡಿದ್ದ ಸಾಲಗಾರರ ಕಾಟ ತಾಳಲಾರದೆ ಮೈಸೂರು-ಊಟಿ ಹೆದ್ದಾರಿ ಬಳಿಯ ಸೆಂಟ್ ಜಾನ್ ಕಾನ್ವೆಂಟ್ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಮೃತನಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದು ಮೃತ ಮಹಮ್ಮದ್ ಇದ್ದೀಸ್‍ರ ಸಹೋದರ ಮಹಮ್ಮದ್ ಇಲಿಯಾಸ್ ಸಾಲಗಾರರ ಕಾಟವೇ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಶಿವಪುರ, ಬೊಮ್ಮಲಾಪುರ, ಬಂಡೀಪುರ ರಸ್ತೆ, ಕೇರಳ ರಸ್ತೆ, ತೆರಕಣಾಂಬಿ ರಸ್ತೆಯ ಹೊಲಗಳು, ತೋಟದ ಮನೆಗಳು, ಖಾಲಿ ಜಾಗಗಳಲ್ಲಿ ಎಗ್ಗಿಲ್ಲದೇ ಜೂಜಾಟ ನಡೆಯುತ್ತಿದ್ದರೂ ಗುಂಡ್ಲುಪೇಟೆ ಪೊಲೀಸರು ಜಾಣ ಮೌನವಹಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಜೂಜಾಟ ಎಲ್ಲೆಲ್ಲಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದ್ದು ಜಿಲ್ಲಾ ಪೊಲೀಸ್ ಅಧಿಕಾರಿ ಈ ಕುರಿತು ಕ್ರಮವಹಿಸಬೇಕಿದೆ.
ವರದಿ:- ಗೂಳಿಪುರ ನಂದೀಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


