ರಾಜ್ಯ

ಮಂಡ್ಯ:ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!

ಕಾಮದಾಸೆ ತೀರಿಸಿಕೊಳ್ಳಲು ಮಂಚಕ್ಕೆ ಕರೆದಾಗ ಬಾರದ ಸೊಸೆಯನ್ನು ಅಮಾನುಶವಾಗಿ ಕೊಂದಿದ್ದ ಮಾವನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆಯಲ್ಲಿ ನಾಗರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಡ್ಯ:ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!
ಮಂಡ್ಯ: ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!
Published On :

ಮಂಡ್ಯ: ಕಾಮದಾಸೆ ತೀರಿಸಿಕೊಳ್ಳಲು ಮಂಚಕ್ಕೆ ಕರೆದಾಗ ಬಾರದ ಸೊಸೆಯನ್ನು ಅಮಾನುಶವಾಗಿ ಕೊಂದಿದ್ದ ಮಾವನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆಯಲ್ಲಿ ನಾಗರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಾಗರಾಜು ತನ್ನ ಮಗ ಅನಿಲ್ ಪತ್ನಿ ವೀಣಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ. ತನ್ನೊಡನೆ ಮಂಚಕ್ಕೆ ಬರದ ಕಾರಣ ಅಸಮಾಧಾನ ಹೊಂದಿದ್ದ ನಾಗರಾಜು ನವೆಂಬರ್ 9ರಂದು ಸೊಸೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಈ ಸಂಬಂಧ ವೀನಾ ಪತಿ, ಆರೋಪಿ ಪುತ್ರನಾದ ಅನಿಲ್  ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆ ಆರೋಪಿ ನಾಗರಾಜುವನ್ನು ಬಂಧಿಸಿದ್ದ ಪೋಲೀಸರು ವಿಚಾರಣೆ ನಡೆಸಿದ್ದು ಕೋರ್ಟ್ ಅವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆದರೆ ವಿಚಾರಣಾಧೀನ ಖೈದಿಯಾಗಿದ್ದ ನಾಗರಾಜು ಮಂಗಳವಾರ ಮುಂಜಾನೆ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಅದನ್ನು ಗಮನಿಸಿದ ಪೋಲೀಅರು ಆತನನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.