ರಾಜ್ಯ

ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ

ಕೊಪ್ಪಳದಲ್ಲಿ ನ.05 ರಿಂದ ನಡೆಯುತ್ತಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ನಕಲಿ ದಾಖಲೆ ನೀಡಿದ್ದ ಯುವಕನೋರ್ವ ಸಿಕ್ಕಿಬಿದ್ದಿದ್ದಾನೆ.

ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ
ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ
Published On :

ಕೊಪ್ಪಳ: ಕೊಪ್ಪಳದಲ್ಲಿ ನ.05 ರಿಂದ ನಡೆಯುತ್ತಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ನಕಲಿ ದಾಖಲೆ ನೀಡಿದ್ದ ಯುವಕನೋರ್ವ ಸಿಕ್ಕಿಬಿದ್ದಿದ್ದಾನೆ. 

ರಾಜ್ಯದ 6 ಜಿಲ್ಲೆಯ ಯುವಕರಿಗಾಗಿ ಸೇನಾ ಭರ್ತಿ ರ್ಯಾಲಿಯನ್ನು ನಡೆಸಲಾಗುತ್ತಿತ್ತು. ಆದರೆ ರಾಜಸ್ಥಾನದಿಂದ ಬಂದಿದ್ದ ಯುವಕ ರಾಜೇಂದ್ರ ಸಿಂಗ್ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ. 

ರಾಜಸ್ಥಾನದ ವ್ಯಾಸಂಗ ಪ್ರಮಾಣಪತ್ರಗಳ ಜೊತೆಗೆ ತಾನು ಗಂಗಾವತಿ ನಿವಾಸಿ ಎಂದು ಪ್ರಮಸಣ ಪತ್ರ ಸಲ್ಲಿಸಿದ್ದಾನೆ. ದೈಹಿಕ ಪರೀಕ್ಷೆಗೂ ಹಾಜರಾಗಿದ್ದ ರಾಜೇಂದ್ರ ಸಿಂಗ್, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಆ ನಂತರ ದಾಖಲಾತಿ ಪರಿಶೀಲನೆ ವೇಳೆ ಈತ ನಕಲಿ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಆರ್ಮಿ ಕರ್ನಲ್ ಕೊಪ್ಪಳ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಯುವಕ ನಕಲಿ ಪ್ರಮಾಣಪತ್ರ ನೀಡಿರುವುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.