ರಾಜ್ಯ

ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯವಾಟಿಕೆ ದಂಧೆ, ಆರು ಜನರ ಬಂಧನ

ಕೆಲಸ ಕೊಡಿಸುವ ನೆಪದಲ್ಲಿ ಹೊರ ರಾಜ್ಯದ ಯುವತಿಯರನ್ನು ವೇಶ್ಯವಾಟಿಕೆ ದಂಧೆಗೆ ದೂಡಿ, ಹಣ ಸಂಪಾದಿಸುತ್ತಿದ್ದ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯವಾಟಿಕೆ ದಂಧೆ, ಆರು ಜನರ ಬಂಧನ
ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯವಾಟಿಕೆ ದಂಧೆ, ಆರು ಜನರ ಬಂಧನ
Published On :

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಹೊರ ರಾಜ್ಯದ ಯುವತಿಯರನ್ನು ವೇಶ್ಯವಾಟಿಕೆ ದಂಧೆಗೆ ದೂಡಿ, ಹಣ ಸಂಪಾದಿಸುತ್ತಿದ್ದ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಹೇಶ್ (23), ಮನುಕುಮಾರ್ (22), ಸ್ವರೂಪ (19), ರವಿ‌(32), ತುಕಾರಾಮ್ (27) ಬಂಧಿತ ಆರೋಪಿಗಳು.

ನಗರದ ಕೆ ಆರ್ ಪುರಂ ನ ಬಾಡಿಗೆ ಮನೆಯೊಂದರಲ್ಲಿ‌ ಹೊರ ರಾಜ್ಯದ ಹುಡುಗಿಯರನ್ನು ಕಳ್ಳ ಸಾಗಾಣಿಕೆ ಮಾಡಿ, ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಇದೇ ತಿಂಗಳ 12 ರಂದು ಸಂಜೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರು ಜನರನ್ನು ಬಂಧಿಸಿದ್ದಾರೆ.

ಬಂಧಿತರು ಯುವತಿಯರಿಗೆ ನಗರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದಿದ್ದರು.ಸಧ್ಯ ಯುವತಿಯರನ್ನು ರಕ್ಷಿಸಿರುವ ಸಿಸಿಬಿ ಪೋಲೀಸರು ಬಂಧಿತರಿಂದ  ಮೊಬೈಲ್, ನಗದು, ಸ್ಯಾಂಟ್ರೋ ಕಾರು, ಡಿಯೋ ದ್ವಿಚಕ್ರ ವಾಹನ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.