ಕೆರೆಯಲ್ಲಿ ಮುಳುಗುತ್ತಿದ್ದ ಯುವಕನ ಪ್ರಾಣ ರಕ್ಷಿಸಿದ ಶಾಸಕ, ಮಾಜಿ ಸಂಸದ!
ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ ಯುವಕನೋರ್ವನನ್ನು ಶಾಸಕ, ಹಾಗೂ ಮಾಜಿ ಸಂಸದರ ನೆರವಿನಿಂದ ರಕ್ಷಿಸಿರುವ ಘಟನೆ ನಾಗಮಂಗಲದ ಬಿಂಡೇನಹಳ್ಳಿಯಲ್ಲಿ ನಡೆದಿದೆ.

ಮಂಡ್ಯ: ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ ಯುವಕನೋರ್ವನನ್ನು ಶಾಸಕ, ಹಾಗೂ ಮಾಜಿ ಸಂಸದರ ನೆರವಿನಿಂದ ರಕ್ಷಿಸಿರುವ ಘಟನೆ ನಾಗಮಂಗಲದ ಬಿಂಡೇನಹಳ್ಳಿಯಲ್ಲಿ ನಡೆದಿದೆ.
ಅಭಿ ಎಂಬ ಯುವಕನನ್ನೇ ನಾಗಮಂಗಲ ಶಾಸಕ ಎನ್.ಸುರೇಶ್ ಗೌಡ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಸಮಯ ಪ್ರಜ್ಞೆಯಿಂದ ರಕ್ಷಿಸಲಾಗಿದೆ..
ಘಟನೆ ಹಿನ್ನೆಲೆ
ನಾಗಮಂಗಲ ತಾಲ್ಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ಸುಮಾರು 20 ವರ್ಷಗಳ ನಂತರ ಬಿಂಡೇನಹಳ್ಳಿ ಕೆರೆ ತುಂಬಿದ್ದು ಕೆರೆ ತುಂಬಿದ ಸಂತೋಷಕ್ಕೆ ಗ್ರಾಮದ ಜನತೆ ದೇವರ ಪೂಜೆ ನಡೆಸಿ ತೆಪ್ಪೋತ್ಸವ ನಡೆಸುತ್ತಿದ್ದರು.
ಬೆಂಗಳೂರಿನಿಂದ ಈ ತೆಪ್ಪೋತ್ಸವಕ್ಕೆ ಆಗಮಿಸಿದ್ದ ಅಭಿ ಎಂಬ ಯುವಕ ತೆಪ್ಪೋತ್ಸವದ ವೇಳೆ ಈಜಲು ಕೆರೆಗೆ ಇಳಿದು ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದ. ಈ ಸಂದರ್ಭದಲ್ಲಿ ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದ. ಇದನ್ನು ಗಮನಿಸಿದ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಸುರೇಶ್ ಗೌಡ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರು ಹಾಗೂ ಸ್ಥಳದಲ್ಲೇ ಇದ್ದ ಜನತೆ ತೆಪ್ಪವನ್ನು ವಾಪಸ್ ಕರೆಸಿ ಯುವಕನ ರಕ್ಷಣೆ ಮಾಡಿದ್ದಾರೆ.
ಈಜು ಬಾರದಿದ್ದರು ನೀರಿಗೆ ಇಳಿದ ಈ ಯುವಕನ ಹುಚ್ಚಾಟಕ್ಕೆ ಶಾಸಕ, ಮಾಜಿ ಸಂಸದರು ಬೆಸ್ತುಬಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿ ನಿಟ್ಟುಸಿರು ಬಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


