ಶಿರಸಿ: ಕಾಡಾನೆಗಳ ಹಿಂಡು ಕಂಡು ಹೆದರಿದ ಸ್ಥಳೀಯರು
ಹೊಲಗದ್ದೆಗಳಲ್ಲಿ ಹಗಲಿನಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದು ತಾಲ್ಲೂಕಿನ ದಾಸನಕೊಪ್ಪ ಬದನಗೋಡ ಭಾಗದಲ್ಲಿ ಕೃಷಿಕರು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಶಿರಸಿ: ಹೊಲಗದ್ದೆಗಳಲ್ಲಿ ಹಗಲಿನಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದು ತಾಲ್ಲೂಕಿನ ದಾಸನಕೊಪ್ಪ ಬದನಗೋಡ ಭಾಗದಲ್ಲಿ ಕೃಷಿಕರು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಗುರುವಾರ ಸ್ಥಳೀಯ ಕಾಡಂಚಿನ ಗದ್ದೆಗಳಲ್ಲಿ ನಾಲ್ಕು ಆನೆಗಳ ಹಿಂಡು ಕಾಣಿಸಿಕೊಂಡಿದೆ ಎಂದು ಬದನಗೋಡ ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಮಾಹಿತಿ ನೀಡಿದರು ಕಾಡಾನೆಗಳು ಗದ್ದೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡ ಸ್ಥಳೀಯರು ಚಕಿತರಾಗಿ ಭಾರಿ ಕುತೂಹಲದಿಂದ ವೀಕ್ಷಿಸಿದರು ನಂತರ ಜನ ಗುಂಪು ಗುಂಪಾಗಿ ಸೇರಿ ದೊಡ್ಡದಾಗಿ ಗೌಜಿ ಎಬ್ಬಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದರು ಆದರೆ ಹಿಂಡಿನಲ್ಲಿದ್ದ ಎರಡು ಆನೆಗಳು ಸಾರ್ವಜನಿಕರ ಗುಂಪಿನತ್ತ ತಿರುಗಿದಾಗ ಜನರೆಲ್ಲ ಗಾಬರಿಗೊಂಡು ಕಾಲ್ಕಿತ್ತು ಓಡತೊಡಗಿದರು.
ಈ ಮಧ್ಯೆ ಕಾಡಾನೆಗಳ ಹಿಂಡು ಸ್ಥಳೀಯ ಭತ್ತದ ಗದ್ದೆ ಮೆಕ್ಕೆಜೋಳ ಗೋವಿನ ಜೋಳ ಅನಾನಸ್ ಶುಂಠಿ ಬೆಳೆ ಪ್ರದೇಶದಲ್ಲಿ ಸಂಚರಿಸಿದ್ದು ಅವುಗಳಿಗೆ ಎಷ್ಟು ಹಾನಿಯಾಗಿದೆ ಎಂಬುದರ ನಿಖರ ಅಂದಾಜು ಮಾಡಬೇಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವರದಿ: ಹೆಚ್ ಕೆ ಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


