ಬೆಂಗಳೂರು: ಪ್ರೀತಿಸಿದ ಯುವತಿಯೊಡನೆ ವಿವಾಹವಾದ 25 ದಿನದಲ್ಲೇ ವಿಷ ಕುಡಿದು ಪತಿ ಆತ್ಮಹತ್ಯೆ!
ಪತ್ನಿಯ ಹಠದ ಸ್ವಭಾವದಿಂಡ ಬೇಸತ್ತ ಪತಿಯೊಬ್ಬ ಮದುವೆಯಾದ ಕೇವಲ ಇಪ್ಪತ್ತೈದು ದಿನಗಳಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Published On :
ಬೆಂಗಳೂರು: ಪತ್ನಿಯ ಹಠದ ಸ್ವಭಾವದಿಂಡ ಬೇಸತ್ತ ಪತಿಯೊಬ್ಬ ಮದುವೆಯಾದ ಕೇವಲ ಇಪ್ಪತ್ತೈದು ದಿನಗಳಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳುರು ಹಲಸೂರು ನಿವಾಸಿಯಾಗಿದ್ದ ಆರ್.ಶಂಕರ್ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಈತ ಬಿಪಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಇಪ್ಪತ್ತೈದು ದಿನಗಳ ಹಿಂಡಷ್ತೇ ತಾನು ಪ್ರೀತಿಸುತ್ತಿದ್ದ ಲಕ್ಷಿತಾ ಎಂಬ ಯುವತಿಯೊಡನೆ ವಿವಾಹವಾಗಿದ್ದ.
ಸುಮಾರು ಎರಡು ವರ್ಷಗಳಿಂದ ಶಂಆರ್-ಲಕ್ಷಿತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ವಿವಾಹವಾದ ನಂತರ ಲಕ್ಷಿತಾ ತಾವಿಬ್ಬರೇ ಬೇರೆ ಮನೆ ಮಾಡಬೇಕೆಂದು ಹಠ ಹಿಡಿದ್ದಾಳೆ. ಆಗ ಶಂಕರ್ ಪತ್ನಿಯ ಬೇಡಿಕೆಯನ್ನು ಮನ್ನಿಸದಿದ್ದ ಕಾರಣ ಆಕೆ ತವರು ಮನೆಗೆ ಹೋಗಿದ್ದು ಮತ್ತೆ ಹಿಂತಿರುಗಿರಲಿಲ್ಲ.
ಶಂಕರ್ ಹಲವಾರು ಬಾರಿ ಲಕ್ಷಿತಾಗೆ ಮನೆಗೆ ಹಿಂತಿರುಗಲು ಕೇಳಿದರೂ ಆಕೆ ಒಪ್ಪಿರಲಿಲ್ಲ. ಬದಲಿಗೆ ಆಕೆ ನಿನ್ನೊಡನೆ ಆದ ವಿವಾಹವನ್ನೇ ಮುರಿದುಕೊಳ್ಳುತ್ತೇನೆ ಎಂದಿದ್ದಳು.
ಆಗ ಶಂಕರ್ ತಾನು ಸಾಯುವುದಕ್ಕೆ ನಿರ್ಧರಿಸಿದ್ದು ವಿಷ ಸೇವಿಸುವ ಮುನ್ನ ತಾನು ತೆಗೆದುಕೊಳ್ಳುತ್ತಿರುವ ವಿಷದ ಬಾಟಲಿಯ ಚಿತ್ರವನ್ನು ಪತ್ನಿ ಲಕ್ಷಿತಾಗೆ ವಾಟ್ಸ್ ಅಪ್ ಮಾಡಿದ್ದಾನೆ. ಹಾಗೂ "ನೀನು ಬಾರದಿದ್ದರೆ ಸಾಯುವುದು ಖಚಿತ" ಎಂದು ಸಂದೇಶ ಕಳಿಸಿದ್ದಾನೆ. ಆದರೆ ಲಕ್ಷಿತಾ ಮಾತ್ರ ಅದಕ್ಕೆ ಕ್ಯಾರೇ ಎಂದಿರಲಿಲ್ಲ. ಇದರಿಂದ ಮನನೊಂದ ಶಂಕರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪುತ್ರನ ಸಾವಿಗೆ ಸೊಸೆಯೇ ಪ್ರೇರಣೆ ನೀಡಿದ್ದಾಳೆ ಎಂದು ಶಂಕರ್ ತಂದೆ ರಾಜನ್ ಹಲಸೂರು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೋಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಲಕ್ಶಿತಾ ವಿರುದ್ಧ ಸಹ ದೂರು ಸ್ವೀಕರಿಸಿದ್ದಾರೆ. ಹಲಸೂರು ಠಾಣೆಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


