ಮಹಿಳೆಯನ್ನು ಅಪಹರಿಸಿದ ನಾಲ್ವರ ತಂಡ, ಪ್ರೇಮಿಯನ್ನು ನೋಡಿದ್ದಕ್ಕೆ ಥಳಿತ!
ತನ್ನ ಪ್ರೇಮಿಯನ್ನು ನೋಡಿದ್ದಕ್ಕಾಗಿ ನಾಲ್ವರ ತಂಡ ಮಹಿಳೆಯನ್ನು ಅಪಹರಿಸಿ ಥಳಿಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

Published On :
ಬೆಂಗಳೂರು: ತನ್ನ ಪ್ರೇಮಿಯನ್ನು ನೋಡಿದ್ದಕ್ಕಾಗಿ ನಾಲ್ವರ ತಂಡ ಮಹಿಳೆಯನ್ನು ಅಪಹರಿಸಿ ಥಳಿಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
ವೈಟ್ ಫೀಲ್ಡ್ ನ ಬಿ. ನಾರಾಯಣಪುರದ ನಿವಾಸಿಯಾಗಿರುವ ಸಂತ್ರಸ್ತೆ ತನ್ನ ಮೇಲಿನ ಹಲ್ಲೆಯ ಕುರಿತು ಜೀವನ್ ಭೀಮಾ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತ್ನಿಯಿಂದ ದೂರವಾಗಿರುವ ಸಂತ್ರಸ್ತ ಮಹಿಳೆ ರಚನಾ (ಹೆಸರು ಬದಲಾವಣೆ ಮಾಡಲಾಗಿದೆ) ವೈಟ್ ಫೀಲ್ಡ್ ನಲ್ಲಿ ಮನೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರಿಗೆ ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ 9 ತಿಂಗಳಿನಿಂದ ತಾನು ಕೃಷ್ಣ ಎಂಬಾತನನ್ನು ಇಷ್ಟಪಡುತ್ತಿದ್ದು ವಿವಾಹವಾಗಬೇಕಿಂದದ್ದರು. ಆದರೆ ಕೆಲವು ತಿಂಗಳುಗಳಿಂದ ಆಕೆ ತನ್ನ ಪ್ರೇಮಿಯನ್ನು ಭೇಟಿ ಮಾಡಲು ಆಗಿರಲಿಲ್ಲ. ಇದನ್ನು ಅರಿತ ತನ್ನ ಸ್ನೇಹಿತೆ ಸುಷ್ಮಾ (ಹೆಸರು ಬದಲಾವಣೆ) ತನ್ನ ಪತಿ ಬಸವರಾಜುಗೆ ತಿಳಿಸಿ ತನ್ನ ಸ್ನೇಹಿತೆಗೆ ಕೃಷ್ಣನನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದ್ದರು. ಭೇಟಿ ಮಾಡಲು ತೆರಳಿದಾಗ ನಾಲ್ವರ ತಂಡ ಆಕೆಯನ್ನು ಚಾಕುವಿನಿಂದ ಬೆದರಿಸಿ ಹೊಸಕೋಟೆಗೆ ಕರೆದೊಯ್ದಿದ್ದಾರೆ. ಈ ಪೈಕಿ ಕೆಲವರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರೆ, ಮತ್ತೋರ್ವ ಕೃಷ್ಣನನ್ನು ಭೇಟಿ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಮಧ್ಯರಾತ್ರಿ 3 ಗಂಟೆ ವೇಳೆಗೆ ಆಕೆ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


