ರಾಜ್ಯ

ಗದಗ: ಆಕರ್ಷಕ ಬಹುಮಾನದ ಆಮಿಷವೊಡ್ಡಿ ಲಾಟರಿ ಕಂಪೆನಿಯಿಂದ 4 ಸಾವಿರ ಮಂದಿಗೆ ಪಂಗನಾಮ!

ಜಿಲ್ಲೆಯ ನರಗುಂದ ತಾಲ್ಲೂಕಿನ ಲಾಟರಿ ಕಂಪೆನಿಯಿಂದ ಮೋಸಕ್ಕೊಳಗಾದ ಗ್ರಾಹಕರು ಲಾಟರಿ ಕಂಪೆನಿ ...

ಗದಗ: ಆಕರ್ಷಕ ಬಹುಮಾನದ ಆಮಿಷವೊಡ್ಡಿ ಲಾಟರಿ ಕಂಪೆನಿಯಿಂದ 4 ಸಾವಿರ ಮಂದಿಗೆ ಪಂಗನಾಮ!
ಸಾಂದರ್ಭಿಕ ಚಿತ್ರ
Published On :
ಗದಗ: ಜಿಲ್ಲೆಯ ನರಗುಂದ ತಾಲ್ಲೂಕಿನ ಲಾಟರಿ ಕಂಪೆನಿಯಿಂದ ಮೋಸಕ್ಕೊಳಗಾದ ಗ್ರಾಹಕರು ಲಾಟರಿ ಕಂಪೆನಿ ಮಾಲೀಕನ ಮನೆಯೊಳಗೆ ನುಗ್ಗಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಲಾಟರಿ ಖರೀದಿಸಿದ್ದ ಕೆಲವು ಮಹಿಳೆಯರು ಮಾಲೀಕರ ಮನೆಯೊಳಗೆ ನುಗ್ಗಿ ಕುರ್ಚಿ ಮತ್ತು ಟೇಬಲ್ ಗಳನ್ನು ಹೊತ್ತುಕೊಂಡು ಹೋದ ಪ್ರಸಂಗ ಕೂಡ ನಡೆಯಿತು.
ನರಗುಂದ ತಾಲ್ಲೂಕಿನ ಸುಮಾರು 4 ಸಾವಿರ ಮಂದಿ ಹಲವರು 250 ರೂಪಾಯಿ ಕಟ್ಟಿ ಲಾಟರಿ ಖರೀದಿಸಿ ಕಂಪೆನಿಯಿಂದ ಬಹುಮಾನ ಘೋಷಿಸುವುದಕ್ಕೆ ಕಾಯುತ್ತಿದ್ದರು.
ಫಲಿತಾಂಶ ಘೋಷಿಸಿದಾಗ ಹಣ ಕೊಟ್ಟು ಟಿಕೆಟ್ ಖರೀದಿಸಿದವರ ಯಾರ ಹೆಸರು ಕೂಡ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಕಾಡಪ್ಪ ಕಕನೂರು ಮತ್ತು ನರಗುಂದ ಪಟ್ಟಣದ ಹುಣಸಿಕಟ್ಟಿ ಗ್ರಾಮದ ಚಿಕ್ಕೊಪ್ಪದ ಎಸ್ ಕೆಯವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.