ಪ್ರಶ್ನೆಪತ್ರಿಕೆ ಎಡವಟ್ಟು: ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವಜಾ
ಶಾಲಾ ಪ್ರಶ್ನೆಪತ್ರಿಕೆಯಲ್ಲಿ ರೈತರ ಮಿತ್ರ ಯಾರು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಎಚ್.ಡಿ,. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ,.ಎಸ್. ಯಡಿಯೂರಪ್ಪ ಆಯ್ಕೆಗಳನ್ನು ನಿಡಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಿದ್ದ,,,,

Published On :
ಬೆಂಗಳೂರು: ಶಾಲಾ ಪ್ರಶ್ನೆಪತ್ರಿಕೆಯಲ್ಲಿ ರೈತರ ಮಿತ್ರ ಯಾರು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಎಚ್.ಡಿ,. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ,.ಎಸ್. ಯಡಿಯೂರಪ್ಪ ಆಯ್ಕೆಗಳನ್ನು ನಿಡಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಿದ್ದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಹೈಸ್ಕೂಲ್ ನ ಅಧ್ಯಾಪಪಕನನ್ನು ಶಾಲಾ ಆಡಳಿತ ಮಂಡಳಿ ಹುದ್ದೆಯಿಂದ ವಜಾಗೊಳಿಸಿದೆ.
"ಪ್ರಶ್ನೆ ಪತ್ರಿಕೆ ತಯಾರಿಸುವ ಸಂಪೂರ್ಣ ಜವಾಬ್ದಾರಿ ಸಿಬಂದಿ ವರ್ಗಕ್ಕೆ ಸೇರಿದ್ದಾಗಿತ್ತು. ಹಾಗಾಗಿ ಈ ಪ್ರಶ್ನೆಪತ್ರಿಕೆ ತಯಾರಿಸಿದ್ದ ಶಿಕ್ಷಕನನ್ನು ಹುದ್ದೆಯಿಂದ ವಜಾಗೊಳಿಸಿದ್ದೇವೆ"ಶಾಲಾ ಪ್ರಾಂಶುಪಾಲ ರಾಘವೇಂದ್ರ ಇಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ "ರೈತನ ಮಿತ್ರ ಯಾರು?" ಎಂಬ ಪ್ರಶ್ನೆ ಇದ್ದು ಇದಕ್ಕೆ ಆಯ್ಕೆಗಳನ್ನಾಗಿ ಕುಮಾರಸ್ವಾಮಿ, ಎರೆಹುಳ ಹಾಗೂ ಯಡಿಯೂರಪ್ಪ ಎಂದು ಪ್ರಕಟಿಸಲಾಗಿತ್ತು. ಈ ಪ್ರಶ್ನೆ ಹಾಗು ಆಯ್ಕೆಗಳುರಾಜ್ಯಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಕಾರಣವಾಗಿದ್ದವು.
ಆಡಳಿತ ಮಂಡಳಿಯ ಕಣ್ತಪ್ಪಿನಿಂದ ಈ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಸೇರಿಸಲಾಗಿದೆ ಎಂದು ಪ್ರಾಶುಪಾಲರು ಹೇಳಿದ್ದಾರೆ. ಅಂತೆಯೇ ಪರೀಕ್ಷೆಯಲ್ಲಿನ ಪ್ರಶ್ನೆಯು ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಉತ್ತೇಜಿಸುವಂತಹಾ ಉದ್ದೇಶದಿಂದ ಕೂಡಿಲ್ಲ ಎಂದೂ ಶಾಲಾ ಆಡಳಿತವು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಎಚ್.ಡಿ.ಕುಮಾರಸ್ವಾಮಿHD KumaraswamyYeddyurappaಯಡಿಯೂರಪ್ಪBengaluru teacherearthwormsಬೆಂಗಳೂರು ಶಿಕ್ಷಕಎರೆಹುಳ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


