ರಾಜ್ಯ

ಬೆಂಗಳೂರು: ಐಷಾರಾಮಿ ಕಾರು ಟೆಸ್ಟ್‌ ಡ್ರೈವ್‌ ವೇಳೆ ಅಪಘಾತ, ಓರ್ವ ಸಾವು, ಮೂವರಿಗೆ ಗಾಯ

ಐಷಾರಾಮಿ ಕಾರು ಟೆಸ್ಟ್‌ ಡೈವ್‌ ಮಾಡುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಮತ್ತು ಮಗು ಸೇರಿದಂತೆ ಮೂವರು...

ಬೆಂಗಳೂರು: ಐಷಾರಾಮಿ ಕಾರು ಟೆಸ್ಟ್‌ ಡ್ರೈವ್‌ ವೇಳೆ ಅಪಘಾತ, ಓರ್ವ ಸಾವು, ಮೂವರಿಗೆ ಗಾಯ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಐಷಾರಾಮಿ ಕಾರು ಟೆಸ್ಟ್‌ ಡೈವ್‌ ಮಾಡುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಮತ್ತು ಮಗು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಇಂದು ಮಧ್ಯಾಹ್ನ ನಾಯಂಡಹಳ್ಳಿಯ ನೈಸ್‌ ರಸ್ತೆ ಟೋಲ್‌ ಬಳಿ ಈ ಅಪಘಾತ ಸಂಭವಿಸಿದ್ದು, ಗೌತಮ್‌ ಎನ್ನುವವರು ಟೆಸ್ಟ್‌ ಡ್ರೈವ್‌ಗೆಂದು ಬಂದಿದ್ದು, ಅವರೊಂದಿಗೆ ಅಣ್ಣ, ಅತ್ತಿಗೆ ಮತ್ತು ಮಗು ಬಂದಿದ್ದರು. 
ಕಾರು ಟೆಸ್ಟ್ ಡ್ರೈವ್‌ ಮಾಡುತ್ತಿದ್ದ ವೇಳೆ ಕಂದಕಕ್ಕೆ ಬಿದ್ದಿದ್ದು, ಗೌತಮ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೌತಮ್ ಸಹೋದರ, ಅತ್ತಿಗೆ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ಕಂಪೆನಿಯ ಸಿಬ್ಬಂದಿ ಕಾರಿನಿಂದ ಹಾರಿ ಪ್ರಾಣಪಾಯಾದಿಂದ ಪಾರಾಗಿದ್ದಾರೆ.
ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.