ರಾಜ್ಯ

ಕನ್ನಡ ಬಹಳ ಸುಂದರವಾದ ಭಾಷೆ: ಪ್ರಧಾನಿ ಮೋದಿ

ಕನ್ನಡ ಬಹಳ ಸುಂದರವಾದ ಭಾಷೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹಾಡಿ ಹೊಗಳಿದ್ದಾರೆ.

ಕನ್ನಡ ಬಹಳ ಸುಂದರವಾದ ಭಾಷೆ: ಪ್ರಧಾನಿ ಮೋದಿ
ಸಂಗ್ರಹ ಚಿತ್ರ
Published On :
ನವದೆಹಲಿ: ಕನ್ನಡ ಬಹಳ ಸುಂದರವಾದ ಭಾಷೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹಾಡಿ ಹೊಗಳಿದ್ದಾರೆ.
ಇತ್ತೀಚೆಗೆ ಲೋಕಸಭಾ ಚುನಾವಣಾ ಪ್ರಚಾರದ ನಿಮಿತ್ತ ಕರ್ನಾಟಕದ ಕಲ್ಬುರ್ಗಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿ ನೆರೆದಿದ್ದವರ ಮನ ಗೆದ್ದಿದ್ದರು. 'ಕಲ್ಬುರ್ಗಿಯ ಎಲ್ಲ ಬಂಧು-ಭಗಿನಿಯರಿಗೆ ನಮಸ್ಕಾರ. ಕಲ್ಬುರ್ಗಿ ಜಿಲ್ಲೆ ತ್ಯಾಗ, ಸೇವಾಮನೋಭಾವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬಂದು ಮಾತನಾಡುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ' ಎಂದು ಕನ್ನಡದಲ್ಲೇ ಹೇಳಿದ್ದರು. ಆ ವಿಡಿಯೋ ಈಗ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಕರ್ನಾಟಕದ ಸಹನಾ ಹೊಳಿಮಠ್ ಎಂಬುವವರು ಹೊಗಳಿ, ಪ್ರಧಾನಿ ಧ್ವನಿಯಲ್ಲಿ ಕನ್ನಡ ಕೇಳುವುದಕ್ಕೆ ಖುಷಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿ ಟ್ವೀಟ್ ಮಾಡಿದ್ದಲ್ಲದೇ ಕನ್ನಡ ಬಹಳ ಸುಂದರವಾದ ಭಾಷೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ತಮ್ಮ ಟ್ವೀಟ್ ಗೆ ಸ್ವತಃ ಪ್ರಧಾನಿಗಳಿಂದಲೇ ಪ್ರತಿಕ್ರಿಯೆ ಬಂದಿರುವುದಕ್ಕೆ ಸಹನಾ ಹೊಳಿಮಠ್ ಅವರೂ ಕೂಡ ತುಂಬಾ ಖುಷಿ ಪಟ್ಟಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಅಂತೆಯೇ ಪ್ರಧಾನಿ ಮೋದಿ ಅವರ ಕನ್ನಡ ಪ್ರೀತಿಗೆ ಹಲವು ಕನ್ನಡ ಟ್ವೀಟಿಗರೂ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.