ರಾಜ್ಯ

ಮೇ ತಿಂಗಳಲ್ಲಿ ಬೀದಿ ನಾಯಿಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್: ಬಿಬಿಎಂಪಿ

ಅಪಘಾಕ್ಕೀಡಾಗಿ ಗಾಯಗೊಂಡ ಅಥವಾ ಬೇರೆ ರೀತಿಯ ಕಾಯಿಲೆಯಿಂದ ಬಳಲುತ್ತಿರುವ ಬೀದಿ ...

ಮೇ ತಿಂಗಳಲ್ಲಿ ಬೀದಿ ನಾಯಿಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್: ಬಿಬಿಎಂಪಿ
ಆಂಬ್ಯುಲೆನ್ಸ್
Published On :
ಬೆಂಗಳೂರು: ಅಪಘಾಕ್ಕೀಡಾಗಿ ಗಾಯಗೊಂಡ ಅಥವಾ ಬೇರೆ ರೀತಿಯ ಕಾಯಿಲೆಯಿಂದ ಬಳಲುತ್ತಿರುವ ಬೀದಿ ನಾಯಿಗಳ ಚಿಕಿತ್ಸೆಗೆ ಪ್ರಾಣಿಪ್ರಿಯರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಾಣಿ ಆಂಬ್ಯುಲೆನ್ಸ್ ನ್ನು ಕರೆಯಬಹುದು.
ಮೇ ತಿಂಗಳಿನಿಂದ ಬೀದಿ ನಾಯಿಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್ ಆರಂಭವಾಗಲಿದ್ದು ಬಿಬಿಎಂಪಿ ಬಜೆಟ್ ನಲ್ಲಿ ಇದಕ್ಕೆ 25 ಲಕ್ಷ ಮೀಸಲಿಡಲಾಗಿದೆ.
ಬಿಬಿಎಂಪಿಯ ಮೂರು ಆಂಬ್ಯುಲೆನ್ಸ್ ರಸ್ತೆಗಿಳಿಯಲಿದ್ದು ಅವು ಬೀದಿ ನಾಯಿಗಳ ಚಿಕಿತ್ಸೆಗಾಗಿಯೇ ಇರುವಂತದ್ದು. ವಾಹನದಲ್ಲಿ ಪಶುವೈದ್ಯರು, ಪ್ಯಾರಾ ವೆಟ್ ಸಿಬ್ಬಂದಿ ಮತ್ತು ಚಿಕಿತ್ಸೆಗಾಗಿ ಪ್ರಥಮ ಚಿಕಿತ್ಸಾ ಮತ್ತು ಇತರ ಮೂಲಭೂತ ಸಾಧನಗಳು ಇರುತ್ತವೆ. ಚಿಕಿತ್ಸೆಗಾಗಿ ಪ್ರಾಣಿ ಜನನ ನಿಯಂತ್ರಣ ಕೇಂದ್ರಗಳಿಗೆ ಅವುಗಳನ್ನು ಕರೆದೊಯ್ಯಲಾಗುತ್ತದೆ ಎಂದು ಪ್ರಾಣಿದಯಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.