ಎಂಥಾ ಕಾಲ ಬಂತಪ್ಪಾ! ಕೆರೆ ನೀರಿಗೆ ಪೊಲೀಸ್ ಕಾವಲು!
ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಜಿಲ್ಲಾಡಳಿತ ನಂಬಲು ಸಾಧ್ಯವಾಗದ ಅಭೂತ ಪೂರ್ವ ಕ್ರಮಗಳನ್ನು ಕೈಗೊಂಡಿದೆ.

Published On :
ದಾವಣಗೆರೆ: ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಜಿಲ್ಲಾಡಳಿತ ನಂಬಲು ಸಾಧ್ಯವಾಗದ ಅಭೂತ ಪೂರ್ವ ಕ್ರಮಗಳನ್ನು ಕೈಗೊಂಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿ ಸಾಗರ ಕೆರೆ ಮತ್ತು ಚಿತ್ರದುರ್ಗದ ಕೆರೆಗಳಿಗೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ,. ಅಡಿಕೆ ಬೆಳೆಗಾರರಿಂದ ಕೆರೆಯ ನೀರನ್ನು ರಕ್ಷಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಸೆಕ್ಷನ್ 144ರ ಪ್ರಕಾರ ಶಾಂತಿ ಸಾಗರ ಮತ್ತು ಸೂಳೆಕೆರೆ ಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಷೇಧಿಸಲಾಗಿದೆ, ಸುಮಾರು 6,550 ಎಕರೆ ಜಾಗದಲ್ಲಿರುವ ಶಾಂತಿ ಸಾಗರ ಕೆರೆಯಲ್ಲಿ 2.70 ಟಿಎಂಸಿ ನೀರಿದೆ, ಇದರಿಂದ 65 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ,
ಕಳೆದ 10 -15 ವರ್ಷಗಳಿಂದ ಜನರು ಶಾಂತಿ ಸಾಗರ ಕೆರೆ.. ನೀರನ್ನು ಕದಿಯುತ್ತಿದ್ದಾರೆ, ಕೆರೆಯಿಂದ 5-6 ಸಾವಿರ ಲೀಟರ್ ನೀರು ತುಂಬಿಸಿಕೊಂಡು ಹೋಗಿ 5ರಿಂದ 6 ಸಾವಿರ ರು,ಗೆ ಮಾರಾಟ ಮಾಡುತ್ತಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಪಟೇಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


