ಬೆಂಗಳೂರು: ಮಗನಿಗೆ ಮೊಬೈಲ್ ಕೊಟ್ಟು ತಗ್ಲಾಕೊಂಡ ಅಪ್ಪ, ಅಕ್ರಮ ಸಂಬಂಧ ಬಯಲು!
43 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ.....

Published On :
ಬೆಂಗಳೂರು: 43 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ.
ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಂದೆಯ ಅಕ್ರಮ ಸಂಬಂಧವನ್ನು 14 ವರ್ಷದ ಪುತ್ರ ಬಯಲುಗೊಳಿಸಿದ್ದು, ತನ್ನ ತಾಯಿಗೆ ವಿಷಯ ತಿಳಿಸಿದ್ದಾನೆ.
ಮಗ ಗೇಮ್ ಆಡುವುದಕ್ಕಾಗಿ ಅಪ್ಪನ ಮೊಬೈಲ್ ತೆಗೆದುಕೊಂಡಿದ್ದು, ಈ ವೇಳೆ ಅಪ್ಪನ ಅಕ್ರಮ ಸಂಬಂಧ ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಪರಸ್ತ್ರೀ ಜೊತೆಗೆ ಅಪ್ಪ ನಡೆಸಿದ ಅಶ್ಲೀಲ ಸಂಭಾಷಣೆ ಆಡಿಯೋ, ಅಶ್ಲೀಲ ಚಿತ್ರ ಹಾಗೂ ಮೆಸೇಜ್‌ಗಳು ದೊರೆತಿವೆ.
ಮಗ, ಅಪ್ಪನ ಅಕ್ರಮ ಸಂಬಂಧವನ್ನು ಅಮ್ಮನಿಗೆ ತಿಳಿಸಿದ್ದು, ಬಳಿಕ 39 ವರ್ಷದ ಮಹಿಳೆ ನಂದಿನಿ(ಹೆಸರು ಬದಲಾಯಿಸಲಾಗಿದೆ) ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅಕ್ರಮ ಸಂಬಂಧ ಪ್ರಶ್ನಿಸಿದ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಂದಿನಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಟ್ಯೂಷನ್ ಅನ್ನೂ ಕೂಡ ನಡೆಸುತ್ತಾರೆ. ಜುಲೈ 11 ರಂದು ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಪತಿ ನಾಗರಾಜು ಎಂ. ತನ್ನ ಮಗನಿಗೆ ಫೋನ್ ನೀಡಿದರು. ಆ ವೇಳೆ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದ ಬಾಲಕ, ಆಕಸ್ಮಿಕವಾಗಿ ಫೋನ್ ರೆಕಾರ್ಡರ್ ತೆರೆದು ನೋಡಿದಾಗ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಸಂಭಾಷಣೆಗಳು ಹಾಗೂ ಅಶ್ಲೀಲ ಸಂದೇಶಗಳು, ಆಡಿಯೋಗಳನ್ನು ನೋಡಿದ. ತನ್ನ ತಂದೆ ಹಾಗೂ ಮತ್ತೊಬ್ಬ ಮಹಿಳೆಯೊಂದಿಗಿನ ಈ ಸಂಭಾಷಣೆಗಳನ್ನು ನೋಡಿದ ಬಳಿಕ ತಕ್ಷಣ ತನ್ನ ತಾಯಿಗೆ ತೋರಿಸಿದ್ದಾನೆ ಎಂದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


