ರಾಜ್ಯ

ಮಡಿಕೇರಿ: ಪ್ರೀತಿಸಿ ಮದ್ವೆಯಾದ ಜೋಡಿಗೆ ಪೋಷಕರೇ ವಿಲನ್! ಹೆಂಡ್ತಿ ಬೇಕು ಅಂತ ಠಾಣೆ ಮೆಟ್ಟಿಲೇರಿದ ಪತಿ

ಪ್ರೀತಿಸಿ ಮದುವೆಯಾದ ಪತ್ನಿಯನ್ನು ಆಕೆಯ ಮನೆಯವರು ತನ್ನೊಂದಿಗೆ ಭಾಳಲು ಬಿಡುತ್ತಿಲ್ಲ ಪತ್ನಿ ಬೇಕಾದಲ್ಲಿ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪತಿಯೊಬ್ಬ ....

ಮಡಿಕೇರಿ: ಪ್ರೀತಿಸಿ ಮದ್ವೆಯಾದ ಜೋಡಿಗೆ ಪೋಷಕರೇ ವಿಲನ್! ಹೆಂಡ್ತಿ ಬೇಕು ಅಂತ ಠಾಣೆ ಮೆಟ್ಟಿಲೇರಿದ ಪತಿ
ಮಡಿಕೇರಿ: ಪ್ರೀತಿಸಿ ಮದ್ವೆಯಾದ ಜೋಡಿಗೆ ಪೋಷಕರೇ ವಿಲನ್! ಹೆಂಡ್ತಿ ಬೇಕು ಅಂತ ಠಾಣೆ ಮೆಟ್ಟಿಲೇರಿದ ಪತಿ
Published On :
ಮಡಿಕೇರಿ: ಪ್ರೀತಿಸಿ ಮದುವೆಯಾದ ಪತ್ನಿಯನ್ನು ಆಕೆಯ ಮನೆಯವರು ತನ್ನೊಂದಿಗೆ ಭಾಳಲು ಬಿಡುತ್ತಿಲ್ಲ ಪತ್ನಿ ಬೇಕಾದಲ್ಲಿ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪತಿಯೊಬ್ಬ ಪೋಲೀಸರಿಗೆ ದೂರಿತ್ತ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.
ಸಿದ್ದಲಿಂಗಸ್ವಾಮಿ ಹಾಗೂ ಶಿಫಾ ಹಾನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇದೀಗ ಶಿಫಾ ಪೋಷಕರು ಆಕೆಯನ್ನು ಸಿದ್ದಲಿಂಗಸ್ವಾಮಿ ಮನೆಗೆ ಕಳುಹಿಸದೆ ಅವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಒಂದೊಮ್ಮೆ ಪತ್ನಿ ಬೇಕಾದರೆ ಮತಾಂತರ ಆಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಘಟನೆ ವಿವರ
ಏಳು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಸಿದ್ದಲಿಂಗಸ್ವಾಮಿ , ಶಿಫಾ ಹಾನಿ ಪರಸ್ಪರ ಒಪ್ಪಿಗೆಯಿಂಡಲೇ ಬದುಕು ಸಾಗಿಸುತ್ತಿದ್ದರು. ಆದರೆ ರಂಜಾನ್ ವೇಳೆ ಮಗಳನ್ನು ಮನೆಗೆ ಕರೆದೊಯ್ದಿದ್ದ ಶಿಫಾ ಪೋಷಕರು ಆಕೆಯನ್ನು ಮತ್ತೆ ಹಿಂದಕ್ಕೆ ಕಳುಹಿಸಲು ಒಪ್ಪಿಲ್ಲ. ಅಲ್ಲದೆ ಪತ್ನಿ ಬೇಕಾದಲ್ಲಿ ಮತಾಂತರ ಆಗುವಂತೆ ಒತ್ತಾಯಿಸಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ತಿರುಮಲಾಪುರದ ಸಿದ್ದಲಿಂಗಸ್ವಾಮಿ ಕೊಡಗಿನ ಕುಶಾಲನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇವರು ಹಲಗನಹಳ್ಳಿಯ ಶಿಫಾ ಹಾನಿಯನ್ನು ಪ್ರೀತಿಸಿ ಮದುವೆಯಾಗಿದ್ದರು.
ಜನವರಿ 19ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಜೋಡಿ ವಿವಾಹವಾಗಿದ್ದು ಸುಮಾರು ಐದು ತಿಂಗಳ ಕಾಲ ಸಂಸಾರ ನಡೆಸಿದೆ. ಆದರೆ ಮೇ 28ರಂದು ರಂಜಾನ್ ಗಾಗಿ ಶಿಫಾಳನ್ನು ಆಕೆಯ ಪೋಷಕರು ಮನೆಗೆ ಕರೆದೊಯ್ದಿದ್ದು ಮತ್ತೆ  ವಾಪಾಸ್ ಕಳಿಸಿಲ್ಲ. ಎಂದು ಸಿದ್ದಲಿಂಗಸ್ವಾಮಿ  ದೂರಿದ್ದಾರೆ.
ಇನ್ನೊಂದೆಡೆ "ನೀನಿಲ್ಲದೆ ನಾನು ಬದುಕಲ್ಲ" ಎನ್ನುತ್ತಿರುವ ಪತ್ನಿ ಶಿಫಾ ಹಾನಿ ತಾನು ಲೈಸಾಲ್ ಕುಡಿಯುತ್ತಿರುವ ವೀಡಿಯೋವನ್ನು ಕಳಿಸಿದ್ದಾರೆ.
ಇದೀಗ ಸಿದ್ದಲಿಂಗಸ್ವಾಮಿ ತನಗೆ ತನ್ನ ಪತ್ನಿ ಬೇಕು ಎಂದು ಬೈಲಕುಪ್ಪೆ ಪೋಲೀಸರಿಗೆ ದೂರು ಕೊಟ್ಟಿದ್ದಾರೆ. ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.