ರಾಜ್ಯ

ವಿಜಯಪುರ: ನ್ಯಾಯಾಲಯದ ಆವರಣದಲ್ಲಿ ವಿದ್ಯುತ್ ತಗುಲಿ 4 ವರ್ಷದ ಬಾಲಕ ಸಾವು

ನ್ಯಾಯಾಲಯದ ಆವರಣದಲ್ಲಿ ಬಾಲಕನೋರ್ವ ವಿದ್ಯುತ್ ತಗುಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವಿಜಯಪುರ ನಗರದ ಜಿಲ್ಲಾ ನ್ಯಾಯಾಲಯದ ಹೊರ....

ವಿಜಯಪುರ: ನ್ಯಾಯಾಲಯದ ಆವರಣದಲ್ಲಿ ವಿದ್ಯುತ್ ತಗುಲಿ 4 ವರ್ಷದ ಬಾಲಕ ಸಾವು
ಸಾಂದರ್ಭಿಕ ಚಿತ್ರ
Published On :
ವಿಜಯಪುರ: ನ್ಯಾಯಾಲಯದ ಆವರಣದಲ್ಲಿ ಬಾಲಕನೋರ್ವ ವಿದ್ಯುತ್ ತಗುಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವಿಜಯಪುರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದಿದೆ.
ಮಾಸಿದ್ದ ಮಲಕಾರಿ ಒಡೆಯರ್(4) ಸಾವನ್ನಪ್ಪಿದ ದುರ್ದೈವಿ ಬಾಲಕ. ಈತ ತನ್ನ ತಂದೆಯ ಜೊತೆಗೆ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದ. ತಂದೆಯೊಂದಿಗೆ ನೀರು ಕುಡಿಯಲು ಹೋದಾಗ ಪಕ್ಕದಲ್ಲಿದ್ದ ಕಂಬದ ಬಳಿ ವಿದ್ಯುತ್ ಪ್ರವಹಿಸಿ ಆತನಿಗೆ ವಿದ್ಯುತ್ ತಗುಲಿದೆ.
ಬಾಲಕನನ್ನು ಬಿಡಿಸಲು ಹೋದ ತಂದೆಗೂ ವಿದ್ಯುತ್ ತಗುಲಿದೆ. ಕೂಡಲೇ ತಂದೆ ದೂರ ಸರಿದಿದ್ದು, ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.
ಈ ಕುರಿತು ಜಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.