ರಾಜ್ಯ

ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಸ್ನೇಹಿತನಿಗೆ ಚಾಕು ಇರಿತ!

ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ....

ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಸ್ನೇಹಿತನಿಗೆ ಚಾಕು ಇರಿತ!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು  ಬೆಂಗಳೂರಿನಲ್ಲಿ  ನಡೆದಿದೆ.
ಭಾನುವಾರ ರಾತ್ರಿ ಘಟನೆ ನಡೆದಿದೆ.  ನಗರದ ಮಾವಳ್ಳಿ ಮಸೀದಿ ರಸ್ತೆಯಲ್ಲಿ ಶೋಯೆಬ್ ಮತ್ತು ನಬಿ ಕಿತ್ತಾಡಿಕೊಂಡಿದ್ದಾರೆ.
ಶೋಯೆಬ್ ಪಾಷಾ ಮತ್ತು ಸಾಹಿದ್ ಪಾಷಾ ಸಹೋದರರು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ನಬಿ ಅವರನ್ನು ಕೈ ಬೀಸಿ ಕರೆದಿದ್ದಾನೆ.ಪರಸ್ಪರ ಶುಭಾಶಯ ಕೋರಿದ್ದಾರೆ. 
ಮಾತುಕತೆ ನಡೆಸಿದ ಬಳಿಕ ನಬಿ, ಶೋಯಬ್ ನನ್ನು ಹಗ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಶೋಯಬ್ ನಬಿಯನ್ನು ದೂರ ತಳ್ಳಿದ್ದಾನೆ. ಅಲ್ಲದೆ ನಿನ್ನ ಕೆಟ್ಟದಾಗಿ ಉಸಿರಾಡುತ್ತೀಯಾ ಎಂದು ತಿಳಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಶೋಯೆಬ್ ಮಾತಿನಿಂದ ಕೆಂಡಾಮಂಡಲನಾದ ನಬಿ ಚಾಕು ತೆಗೆದುಕೊಂಡು ಬಂದು ಶೋಯಬ್ ಹೊಟ್ಟೆಗೆ ಇರಿದಿದ್ದಾನೆ. ನಂತರ ಅಲ್ಲಿಂದ ಓಡಿ ಹೋಗಿದ್ದಾನೆ, ಸಹೋದರನನ್ನು ರಕ್ಷಿಸಿಲು ಬಂದ ಶಾಹಿದ್ ಗೂ ಚಾಕು ಇರಿದಿದ್ದಾನೆ, ನಂತರ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಬಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದಾಗಿ ಗಾಯಗೊಂಡಿರುವ ಶೋಯಬ್ ಹಾಗೂ ಆತನ ಸಹೋದರ ಶಾಹೀದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.