ಕಾಲುಜಾರಿ ಬಿದ್ದ ಕುರಿಗಾಹಿ: ಆತನನ್ನು ಹುಡುಕಲು ಅರ್ಧ ಕೆರೆ ನೀರು ಖಾಲಿ
ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲುಜಾರಿ ಬಿದ್ದು ಕುರಿಗಾಹಿ ಯುವಕ ನೀರಲ್ಲಿ ಮುಳುಗಿರುವ ಘಟನೆ ಜಿಲ್ಲೆಯ ನೂತನ ಕುಕನೂರು ತಾಲೂಕಿನ ತೊಂಡಿಹಾಳ ...

Published On :
ಕೊಪ್ಪಳ: ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲುಜಾರಿ ಬಿದ್ದು ಕುರಿಗಾಹಿ ಯುವಕ ನೀರಲ್ಲಿ ಮುಳುಗಿರುವ ಘಟನೆ ಜಿಲ್ಲೆಯ ನೂತನ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿ ನಡೆದಿದೆ.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಇಂದ್ರೇಶ ಹಿರೇಕುರುಬರ (18) ಎಂಬಾತನೆ ನೀರಿನಲ್ಲಿ ಮುಳುಗಿರುವ ಯುವಕ. ಈತ ತೊಂಡಿಹಾಳ ಬಳಿಯ ಕೆರೆಯ ಹತ್ತಿರ ನೀರು ಕುಡಿಯಲೆಂದು ಕೆರೆಗೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ನೀರಲ್ಲಿ ಮುಳುಗಿದ್ದಾನೆ.
ಕಲ್ಲೂರು ಗ್ರಾಮದ ಇಂದ್ರೇಶ್ ಕುರಿ ಮೇಯಿಸಲು ತೆರಳಿದ್ದ, 8 ಅಡಿ ಆಳದ ಕೆರೆ ಇದಾಗಿದ್ದು, ಕೆರೆಯಲ್ಲಿ ಬದಿ ತುಂಬಿಕೊಂಡಿತ್ತು. ಕೆರೆಗೆ ಇಳಿದಿದ್ದ ಆತ ಬದಿಯಲ್ಲಿ ಸಿಕ್ಕಿಕೊಂಡಿದ್ದ.
ಇಂದ್ರೇಶ್ ಸಹೋದರಿ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದಳು, ಕೂಡಲೇ ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಕೆರೆಗೆ ಇಳಿದು ಈಜಾಡಿದರೂ ಆತ ಸಿಗಲೇ ಇಲ್ಲ, ಹೀಗಾಗಿ ಕೆರೆಯ ನೀರನ್ನು ಕಾಲಿ ಮಾಡಲಾಯಿತು, ಮಂಗಳವಾರ ಸಂಜೆ ಕೆರೆಗೆ ಬಿದ್ದ ಇಂದ್ರೇಶ್ ಶವ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ಕಳೆದ ವರ್ಷವಷ್ಟೇ ಕೆರೆ ತುಂಬಿತ್ತು ಎಂದು ತಹಶೀಲ್ದಾರ್ ರಮೇಶ್ ಅಲ್ವಾಂಡಿಕರ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಇಂದ್ರೇಶ್ ಶವವನ್ನು ಆತನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


