ರಾಜ್ಯ

ಬೆಂಗಳೂರಿನಲ್ಲಿ 'ಉರಿ' ಸಿನಿಮಾ ನೋಡಿದ ರಕ್ಷಣಾ ಸಚಿವೆ ಸೀತಾರಾಮಮ್ ಹೇಳಿದ್ದು ಹೀಗೆ

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ "ಉರಿ ದಿ ಸರ್ಜಿಕಲ್ ಸ್ಟ್ರೈಕ್" ಹಿಂದಿ ಚಿತ್ರವನ್ನು ವೀಕ್ಷಿಸಿದ್ದಾರೆ.

ಬೆಂಗಳೂರಿನಲ್ಲಿ 'ಉರಿ' ಸಿನಿಮಾ ನೋಡಿದ ರಕ್ಷಣಾ ಸಚಿವೆ ಸೀತಾರಾಮಮ್ ಹೇಳಿದ್ದು ಹೀಗೆ
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
Published On :

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ "ಉರಿ  ದಿ ಸರ್ಜಿಕಲ್ ಸ್ಟ್ರೈಕ್" ಹಿಂದಿ ಚಿತ್ರವನ್ನು ವೀಕ್ಷಿಸಿದ್ದಾರೆ. ಬೆಂಗಳುರಿನಲ್ಲಿ ಚಿತ್ರ ವೀಕ್ಷಣೆ ಮಾಡಿದ ಸಚಿವರು ದೇಶಭಕ್ತಿಯ ಚಿತ್ರಣ ಹೊಂದಿರುವ ಚಿತ್ರವು "ಹೈ ಜೋಷ್" ನೀಡಲಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಬೆಂಗಳೂರು ಸೆಂಟ್ರಲ್ ಮಾಲ್ ನಲ್ಲಿ ಮಾಜಿ ಸೈನಿಕರ ಜತೆ ಕುಳಿತು ಸಚಿವೆ ನಿರ್ಮಲಾ ಸೀತಾರಾಮನ್ ಚಿತ್ರ ವೀಕ್ಷಣೆ ಮಾಡಿದ್ದಾರೆ.

ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ತಾಣಗಳ ಮೇಲೆ ರಾತ್ರೋರಾತ್ರಿ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯ ಕಥೆಯನ್ನಾಧರಿಸಿ "ಉರಿ...." ಚಿತ್ರ ತಯಾರಾಗಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ಭಾರತೀಯ ಸೈನಿಕರ ಸಾಧನೆಯನ್ನು ರೋಚಕವಾಗಿ ತೋರಿಸಲಾಗಿದೆ.

ಸಚಿವರು ಮಾಲ್ ಗೆ ಭೇಟಿ ನೀಡುತ್ತಿದ್ದಂತೆ ಪ್ರೇಕ್ಷಕರು, ಸಾರ್ವಜನಿಕರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿ ಅವರಿಗೆ ಸ್ವಾಗತ ನಿಡಿದ್ದಾರೆ.

ಜನವರಿ 16ರಂದು, ಸೀತಾರಾಮನ್ ಚಿತ್ರದ ನಟ ಮತ್ತು ಸಿಬ್ಬಂದಿಗಳನ್ನು ನವ ದೆಹಲಿಯಲ್ಲಿ ಭೇಟಿ ಮಾಡಿದ್ದರು,

ಚಿತ್ರ ವೀಕ್ಷಣೆ ಬಳಿಕ ಇನ್ನಷ್ಟು ಉತ್ಸಾಹಗೊಂಡಿದ್ದ ಸಚಿವರು ,  ವಾಟ್ ಎ ಪವರ್ ಪ್ಯಾಕ್ಡ್ ಮೂವಿ  ಎಂದಿದ್ದಲ್ಲದೆ ಚಿತ್ರದಲ್ಲಿ ನಟಿಸಿರುವ  ವಿಕಿ ಕೌಶಲ್, ಯಾಮಿ ಗೌತಮ್, ಮೋಹಿತ್ ರೈನಾ, ಮತ್ತು ಪರೇಶ್ ರಾವಲ್ ಮೊದಲಾದವರಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ತಾವು ಸುಇನಿಮಾ ನೊಡಿದ ಅನುಭವದ ಜತೆಗೆ How's the josh?! ಎಂದೂ ಟ್ವೀಟ್ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.