ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ: ಚೇಳು ಕಚ್ಚಿದ ಬಾಲಕ ಸಾವು
ಚೇಳು ಕಚ್ಚಿದ ಬಾಲಕನಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ 14 ವರ್ಷದ ಬಾಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ,...

Published On :
ಹುಬ್ಬಳ್ಳಿ: ಚೇಳು ಕಚ್ಚಿದ ಬಾಲಕನಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ 14 ವರ್ಷದ ಬಾಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ,
ಕುಷ್ಠಗಿ ತಾಲೂಕಿನ ನವಲಹಳ್ಳಿ ಗ್ರಾಮದ ಮಲ್ಲಪ್ಪ ಛಲವಾದಿ ಮೃತ ಬಾಲಕ, ಜನವರಿ 12 ರಂದು ಬಾಲಕನ ಮನೆಯಲ್ಲಿ ಆತನಿಗೆ ಚೇಳು ಕಚ್ಚಿತ್ತು, ಆದರೆ ಆತನಿಗೆ ಚೇಳು ಕಚ್ಚಿದೆ ಎಂಬ ಬಗ್ಗೆ ಅರವಿರಲಿಲ್ಲ, ನೋವು ಹೆಚ್ಚಾದಾಗ ಆತ ಪೋಷಕರಿಗೆ ತಿಳಿಸಿದ್ದ,.
ಪೋಷಕರು ಆತನನ್ನು ತಾವರಗೇರಿ ಆಸ್ಪತ್ರೆಗೆ ಕರೆದೊಯ್ದಿದ್ದರು, ಪರೀಕ್ಷೆ ಮಾಡಿದ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು
ಆರು ಮಂದಿ ಸಹೋದರರಲ್ಲಿ ಬಾಲಕ ಕೊನೆಯ ಮಗನಾಗಿದ್ದ, ಅವರೆಲ್ಲರು ಬೆಂಗಳೂರಿನಲ್ಲಿದ್ದರು, ಮಲ್ಲಪ್ಪ ತನ್ನ ತಾಯಿಯ ಜೊತೆ ನವಲಳ್ಳಿ ಗ್ರಾಮದಲ್ಲಿದ್ದ, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ, ಬಾಲಕನಿಗೆ ವಿಷ ನಿರೋಧಿಸುವ ಇಂಜೆಕ್ಷನ್ ನೀಡಿದ್ದರೇ ಬಾಲಕ ಬದುಕುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


