ತುಮಕೂರು: ಶಾಸಕ ಗೋಪಾಲಯ್ಯ ಸಹೋದರನ ಪುತ್ರಿ ವರಿಸಿದ್ದ ಡ್ರೈವರ್ ಕಗ್ಗೊಲೆ
ಕಾಮಾಕ್ಷಿಪಾಳ್ಯದಿಂದ ನಾಪತ್ತೆಯಾಗಿದ್ದ ಮನು(30) ಶವವಾಗಿ ಪತ್ತೆಯಾಗಿದ್ದಾರೆ, ತುಮಕೂರಿನ ಕೊರಟಗೆರೆಯಲ್ಲಿ ಮನವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ...

Published On :
ತುಮಕೂರು: ಕಾಮಾಕ್ಷಿಪಾಳ್ಯದಿಂದ ನಾಪತ್ತೆಯಾಗಿದ್ದ ಮನು(30) ಶವವಾಗಿ ಪತ್ತೆಯಾಗಿದ್ದಾರೆ, ತುಮಕೂರಿನ ಕೊರಟಗೆರೆಯಲ್ಲಿ ಮನವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಕಿರಿಯ ಸಹೋದರ ಗೂಳಿ ಬಸವಣ್ಣ ಮನೆಯಲ್ಲಿ ಮನು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕೆಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಅವರು ಕೆಲವೊಂದ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ. 40 ದಿನದ ಹಿಂದೆ ಮನು ಗೂಳಿ ಬಸವನ ಮಗಳ ಜೊತೆ ಓಡಿ ಹೋಗಿದ್ದನು, ಜೊತೆಗೆ ಆಕೆಯನ್ನು ದೇವಾಲಯದಲ್ಲಿ ವಿವಾಹವಾಗಿದ್ದನು, ಇಬ್ಬರು ತುಮಕೂರಿನಲ್ಲಿ ವಾಸಿಸುತ್ತಿದ್ದರು.
ಮನುವಿಗೆ ಹೆಚ್ಚಿನ ಪ್ರಮಾಣದಲ್ಲಿ ಮಧ್ಯ ಕುಡಿಸಿದ್ದ ಆರೋಪಿಗಳು ಆತನ ಕೈಗಳನ್ನು ಕಟ್ಟಿ , ಆತನಿಗೆ 14 ಬಾರಿ ಥಳಿಸಿ, ಆತ ಸತ್ತನೆಂದು ಖಚಿತವಾದ ನಂತರ ಕಾರಿನಿಂದ ತಳ್ಳಿದ್ದರು.
ಕೆಲ ವರ್ಷಗಳ ಹಿಂದೆ ಗೂಳಿ ಬಸವ ಹೈಕೋರ್ಟ್ ನ್ಯಾಯಾಧೀಶರ ಮಗಳನ್ನು ವಿವಾಹವಾಗಿದ್ದ, ಇದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಗೂಳಿ ಬಸವನ ಏಕೈಕ ಪುತ್ರಿ ಜೊತೆ ಮನು ಓಡಿ ಹೋಗಿದ್ದ ಎಂದು ಮೂಲಗಳು ತಿಳಿಸಿವೆ,. ಮನು ವಿರುದ್ಧ ರೌಡಿ ಶೀಟರ್ ಕೂಡ ದಾಖಲಾಗಿತ್ತು.
ಮನು ಮೂಲತಃ ತುಮಕೂರಿನ ಬಳ್ಳಗೆರೆ ಗ್ರಾಮದವನು, ಆತನ ತಂದೆ ರಂಗನಾಥಸ್ವಾಮಯ್ಯ ಪೊಲೀಸ್ ಸಿಬ್ಬಂದಿ, ಹಳ್ಳಿಯಲ್ಲಿ ಮನುವಿನ ತಾಯಿ ವಾಸಿಸುತ್ತಿದ್ದಾರೆ. ಮನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸಿಸುತ್ತಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


