ರಾಜ್ಯ

ದೇಶಕಾಯೋ ಯೋಧರಿಗೆ ಸಿಗಲಿದೆ ಮಹಾಬಲೇಶ್ವರನ ನೇರ ದರ್ಶನ, ಗೋಕರ್ಣದಲ್ಲಿ ಸೈನಿಕರಿಗೆ ವಿಶೇಷ ಪ್ರಾಶಸ್ತ್ಯ

ಸೈನಿಕರು, ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಗೋಕರ್ಣದ ಪ್ರಸಿದ್ದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸುವ ಮಹತ್ವದ ನಿರ್ಧರವನ್ನು ಅಲ್ಲಿನ....

ದೇಶಕಾಯೋ ಯೋಧರಿಗೆ ಸಿಗಲಿದೆ ಮಹಾಬಲೇಶ್ವರನ ನೇರ ದರ್ಶನ, ಗೋಕರ್ಣದಲ್ಲಿ ಸೈನಿಕರಿಗೆ ವಿಶೇಷ ಪ್ರಾಶಸ್ತ್ಯ
ಗೋಕರ್ಣ
Published On :
ಕಾರವಾರ: ಸೈನಿಕರು, ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಗೋಕರ್ಣದ ಪ್ರಸಿದ್ದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸುವ ಮಹತ್ವದ ನಿರ್ಧರವನ್ನು ಅಲ್ಲಿನ ಆಡಳಿತ ಮಂಡಳಿ ತೆಗೆದುಕೊಂಡಿದೆ. ಈ ಸ್ಪೌಲಭ್ಯವನ್ನು ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಕಲ್ಪಿಸಿಕೊಡಲಾಗುತ್ತಿದ್ದು ಹಾಲಿ ಸೈನ್ಯದಲ್ಲಿ ಕಾರ್ಯನಿರ್ವಹಿಸುವವರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬದ ಯಾರಾದರೂ ದೇವಸ್ಥಾನಕ್ಕೆ ಆಗಮಿಸಿದರೆ ನೇರವಾಗಿ ದೇವರ ದರ್ಶನ ಪಡೆಯಬಹುದಾಗಿದೆ. ದೇವಾಲಯ ಕಛೇರಿಯನ್ನು ಸಂಪರ್ಕಿಸಿದ ಯಾವುದೇ ಸೈನಿಕರು ಹಾಗೂ ಅವರ ಕುಟುಂಬಕ್ಕೆ ನೇರವಾಗಿ ಗರ್ಭಗುಡಿಗೆ ಕರೆದೊಯ್ದು ದರ್ಶನ ಮಾಡಿಸಿಕೊಡುವ ವ್ಯವಸ್ಥೆ ಜಾರಿಯಲ್ಲಿದೆ.
ದೇವಾಲಯದ ಆಡಳಿತ ಸಮಿತಿಯು ಎರಡು ದಿನಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ಫಲಕವನ್ನು ಅಳವಡಿಸಿದ್ದು ಕರ್ತವ್ಯ ನಿರ್ವಹಿಸುತ್ತಿರುವ ಅಥವಾ ನಿವೃತ್ತ ಹೊಂದಿದ ವೀರಯೋಧರು ದೇವಾಲಯದ ಕಾರ್ಯಾಲಯವನ್ನು ಸಂಪರ್ಕಿಸಿದರೆ, ಶ್ರೀ ದೇವರ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಘೋಷಿಸಲಾಗಿದೆ.
Story image
ಪ್ರತಿದಿನ, ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲಿದ್ದಾರೆ. ಇನ್ನು  ಉತ್ಸವಗಳಂತಹ ವಿಶೇಷ ದಿನಗಳಲ್ಲಿ, ಭಕ್ತರು ದೊಡ್ಡ ಸಂಖ್ಯೆಯಲ್ಲಿ  ಭಕ್ತರು ಆಗಮಿಸುತ್ತಾರೆ. ಭಕ್ತರು ಸುದೀರ್ಘ ಸಾಲುಗಳಲ್ಲಿ ನಿಂತು ಕಾಯಬೇಕಾಗುತ್ತದೆ. ಹೀಗಾಗಿ ದೇಶಕ್ಕಾಗಿ ಜೀವಕೊಡುವ ನಮ್ಮ ಸೈನಿಕರಿಗೆ ಯಾವುದೇ ಕಾಯುವಿಕೆ ಇಲ್ಲದೆ ದೇವರ ದರ್ಶನ ಮಾಡಿಸುವ ಉದ್ದೇಶದಿಂಡ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ದ್ವಾಲಯದ ಆಡಳಿತ ಮಂಡಳಿ ಹೇಳಿದೆ.
ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿರುವ ದೇವಸ್ತ್ಃಆನದ ನಿರ್ವಾಹಕ ಜಿ.ಕೆ. ಹೆಗಡೆ ಮಾತನಾಡಿ, "ಅವರು  ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ನಿವೃತ್ತರಾಗಿದ್ದರೂ ಸಹ , ಅವರು ಕೇವಲ ದೇವಾಲಯದ ಕಚೇರಿಯನ್ನು ಸಂಪರ್ಕಿಸಬೇಕು ಮತ್ತು ಅವರ ಗುರುತು (ಐಡೆಂಟಿಟಿ) ತೋರಿಸಿದರೆ . ದೇವಾಲಯದ ಪ್ರಾಧಿಕಾರವು ಸೈನಿಕನನ್ನು ದರ್ಶನ ಪಡೆಯಲು ಅನುವು ಮಾಡಿಕೊಡುತ್ತದೆ. ಸೈನ್ಯ, ನೌಕಾಪಡೆ, ಏರ್ ಫೋರ್ಸ್, ಬಿಎಸ್ಎಫ್ ಮತ್ತು ಸಿಆರ್ ಪಿಎಫ್  ಸೈನಿಕರು ಈ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.