ಬೆಂಗಳೂರು: ಲೇಡಿಸ್ ಹಾಸ್ಟೆಲ್ ಬಳಿ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದ ವಿಕೃತಕಾಮಿ ಬಂಧನ
ಬನ್ನೇರುಘಟ್ಟ ರಸ್ತೆ ಖಾಸಗಿ ಕಾಲೇಜಿನ ಲೇಡಿಸ್ ಹಾಸ್ಟೆಲ್ ಬಳಿಯ ಕಟ್ಟಡದ ಮೇಲೆ ನಿಂತು ಅರೆನಗ್ನನಾಗಿ ನಿಂತು ಹಸ್ತ ಮೈಥುನ ಮಾಡಿ ವಿಕೃತಿ ಮೆರೆದ ...

Published On :
ಬೆಂಗಳೂರು: ಬನ್ನೇರುಘಟ್ಟ ರಸ್ತೆ ಖಾಸಗಿ ಕಾಲೇಜಿನ ಲೇಡಿಸ್ ಹಾಸ್ಟೆಲ್ ಬಳಿಯ ಕಟ್ಟಡದ ಮೇಲೆ ನಿಂತು ಅರೆನಗ್ನನಾಗಿ ನಿಂತು ಹಸ್ತ ಮೈಥುನ ಮಾಡಿ ವಿಕೃತಿ ಮೆರೆದ ವಿಕೃತಕಾಮಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಂಎಲ್ ಎ ಲೇಔಟ್ ನಿವಾಸಿ ಯಲ್ಲಪ್ಪ (34) ಬಂಧಿತ ಆರೋಪಿ. ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿರುವ ಎನ್ ಎಂಐಎಎಸ್ ಕಾಲೇಜಿನ ಲೇಡಿಸ್ ಹಾಸ್ಟೆಲ್‌ನಲ್ಲಿ ನೂರಾರು ವಿದ್ಯಾರ್ಥಿನಿಯರು ವಾಸಿಸುತ್ತಿದ್ದಾರೆ. ಹಾಸ್ಟೆಲ್ ಹಿಂಭಾಗದ ಕಟ್ಟಡದ ಮೇಲೆ ಕಳೆದ ಹಲವು ದಿನಗಳಿಂದ ರಾತ್ರಿ ವೇಳೆ ಯಲ್ಲಪ್ಪ ಅರೆನಗ್ನನಾಗಿ ನಿಂತುಕೊಂಡು ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದ.
. ಫೆ.12ರಂದು ರಾತ್ರಿ 11 ಗಂಟೆ ಸುಮಾರಿಗೆ ಹಾಸ್ಟೆಲ್ ಹಿಂಭಾಗದ ಕಟ್ಟಡವೇರಿದ ಯಲ್ಲಪ್ಪ, ವಿಕೃತವಾಗಿ ವರ್ತಿಸಿದ್ದಾನೆ. ಹೀಗಾಗಿ, ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್ ಮತ್ತು ಸೆಕ್ಯುರಿಟಿ ಗಾರ್ಡ್‌ಗೆ ಮಾಹಿತಿ ನೀಡಿದ್ದರು. ಗಾರ್ಡ್‌ನನ್ನು ನೋಡಿದ ಕೂಡಲೇ ಆರೋಪಿ, ಕಟ್ಟಡದಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಬೆನ್ನಟ್ಟಿಕೊಂಡು ಹೋದ ವಿದ್ಯಾರ್ಥಿನಿಯರು ಹಾಗೂ ಸೆಕ್ಯುರಿಟಿ ಗಾರ್ಡ್, ಆತನಿಗೆ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಹುಳಿಮಾವು ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಸ್ಟೆಲ್ ವಾರ್ಡನ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯಲ್ಲಪ್ಪನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಡಿದ ಮತ್ತಿನಲ್ಲಿ ಯಲ್ಲಪ್ಪ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


