Bannerghatta

ಬೆಂಗಳೂರು: ಬನ್ನೇರುಘಟ್ಟದಲ್ಲಿ ಸಿನಿಮಾ ಶೈಲಿಯಲ್ಲಿ ದರೋಡೆ; ಯುವಕನಿಗೆ ಲಾಂಗ್ ತೋರಿಸಿ ಬೆದರಿಕೆ, 31 ಲಕ್ಷ ರೂ ಲೂಟಿ..! Video
ಎರಡು ಬೈಕ್ಗಳಲ್ಲಿ ಬೆನ್ನಟ್ಟಿಕೊಂಡು ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಕೈಲಾಸ್ನನ್ನು ಅಡ್ಡಗಟ್ಟಿದ್ದಾರೆ. ಕೈಯಲ್ಲಿದ್ದ ಲಾಂಗ್ (Long) ತೋರಿಸಿ ಯುವಕನ ಮೇಲೆ ಹಲ್ಲೆಗೆ ಮುಂದಾದ ದರೋಡೆಕೋರರು ಆತನ ಬೆದರಿಸಿ ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ.

ಬನ್ನೇರುಘಟ್ಟ: ಸಫಾರಿ ವೇಳೆ ಚಿರತೆ ದಾಳಿ; ಮಹಿಳೆಗೆ ಗಾಯ, Video!
ಸಫಾರಿ ಮಾಡುವ ವೇಳೆ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು. ಎಷ್ಟೇ ಭದ್ರತೆ ಇದ್ದರೂ ಸಫಾರಿ ವಾಹನಗಳಲ್ಲಿ ಕುಳಿತಾಗ ಎಚ್ಚರ ತಪ್ಪಿದರೆ ಅನಾಹುತ ಆಗುತ್ತದೆ.

ಮೈಸೂರು, ಬನ್ನೇರುಘಟ್ಟ ಮೃಗಾಲಯ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳ..!
ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟದ ಮೃಗಾಲಯಗಳಲ್ಲಿನ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶ ದರವನ್ನು ಶೇ.50ರಷ್ಟು ಹೆಚ್ಚಿಸುವಂತೆ ಪ್ರಾಧಿಕಾರ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಬೆಂಗಳೂರು: ಬನ್ನೇರುಘಟ್ಟದ ಸುವರ್ಣಮುಖಿ ಕೊಳದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಬನ್ನೇರುಘಟ್ಟ ಕಾಡಿನಲ್ಲಿರುವ ಶಿವ ಮತ್ತು ಆಂಜನೇಯ ದೇವಸ್ಥಾನ ಬಳಿ ಸುವರ್ಣಮುಖಿ ಕೊಳದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಬೆಂಗಳೂರು: ಬನ್ನೇರುಘಟ್ಟದಲ್ಲಿ ತಿಂಗಳಾಂತ್ಯಕ್ಕೆ ಚಿರತೆ ಸಫಾರಿ ಆರಂಭ!
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ದಕ್ಷಿಣ ಭಾರತದಲ್ಲಿಯೇ ಮೊದಲ ಚಿರತೆ ಸಫಾರಿಯನ್ನು ಜೂನ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೇಳಿದ್ದಾರೆ.

ಬನ್ನೇರುಘಟ್ಟ ಮೂಲಕ ಎಲಿವೇಟೆಡ್ ಕಾರಿಡಾರ್: ಕರ್ನಾಟಕ ವನ್ಯಜೀವಿ ಮಂಡಳಿ ಒಪ್ಪಿಗೆ
ಆನೇಕಲ್ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯ (ESZ) ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (BNP) ಮೂಲಕ ಹಾದುಹೋಗುವ 6.63 ಕಿಮೀ ಎತ್ತರದ ಕಾರಿಡಾರ್ ನಿರ್ಮಿಸಲು ಲೋಕೋಪಯೋಗಿ ಇಲಾಖೆ (PWD) ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ (SBW) ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಎಸ್ ಬಿಡಬ್ಲ್ಯು ಸಭೆ ನಡೆಯಿತು.

ಬನ್ನೇರುಘಟ್ಟ: ತಾಯಿ ಕಾಲ್ತುಳಿತಕ್ಕೆ ಸಿಲುಕಿ ಮರಿ ನೀರಾನೆ ಸಾವು
ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಾಯಿಯ ಕಾಲ್ತುಳಿತಕ್ಕೆ ಸಿಲುಕಿದ ಮರಿ ನಿರಾನೆ (ಹಿಪ್ಪೊಪೊಟಮಸ್)ಯೊಂದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಬುಧವಾರ ನಡೆದಿದೆ.

ಅಂಧ ಚಿರತೆ ಮರಿಯ ರಕ್ಷಣೆ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನೆ
ಅಂಧ ಹೆಣ್ಣು ಚಿರತೆ ಮರಿಯೊಂದನ್ನು ರಕ್ಷಣೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ: ಜನವರಿ 1 ರಿಂದ ದರ ಪರಿಷ್ಕರಣೆ ಅನ್ವಯ
ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ ಮತ್ತು ಸಫಾರಿ ವೀಕ್ಷಣೆಯ ಪ್ರವೇಶ ದರವನ್ನು ಜನವರಿ 1 ರಿಂದ ಪರಿಷ್ಕರಿಸಲಾಗುತ್ತಿದೆ.

