ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!
ತನ್ನ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪದ ಓರ್ವ ಮಹಿಳಾ ಉದ್ಯೋಗಿಯ ಮನೆ ಮೇಲೆ ಜಾಬ್ ಪ್ಲೇಸ್ ಮೆಂಟ್ ಏಜನ್ಸಿಯನ್ನು ನಡೆಸುತ್ತಿರುವ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ....

Published On :
ಬೆಂಗಳೂರು: ತನ್ನ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪದ ಓರ್ವ ಮಹಿಳಾ ಉದ್ಯೋಗಿಯ ಮನೆ ಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ಹಲವು ತಿಂಗಳಿನಿಂದ ಯುವತಿಗೆ ತನ್ನನ್ನುವಿವಾಹವಾಗುವಂತೆ ಒತ್ತಾಯಿಸುತ್ತಿದ್ದ. ಅದೊಮ್ಮೆ ಆಕೆಗೆ ಮದುವೆ ಪ್ರಪೋಸ್ ಸಹ ಮಾಡಿದ್ದ ಎನ್ನಲಾಗಿದೆ.
ಯುವತಿಯ ತಾಯಿ ಶಾರದಾ(ಹೆಸರು ಬದಲಿಸಿದೆ) ಲಗ್ಗೆರೆಯ ಅನ್ನಪೂರ್ಣೇಶ್ವರಿ ನಗರದ ನಿವಾಸಿಯಾಗಿದ್ದು ಆಕೆ ಉದ್ಯೋಗ ಮಾಡುತ್ತಿದ್ದ ಸಂಸ್ಥೆಯ ಮಾಲೀಕ ಯೋಗೀಶ್ ಮಂಗಳವಾರ ರಾತ್ರಿ ಆಕೆ ಹಾಗೂ ಆಕೆಯ ಪುತ್ರಿ ಮಲಗಿರುವಾಗ ಮನೆಗೆ ಬೆಂಕಿ ಹಚ್ಚಿದ್ದಾನೆ.
"ನಾನು ಹಾಗೂ ನನ್ನ ಮಗಳು ಮನೆಯಲ್ಲಿ ಸುಟ್ಟ ವಾಸನೆಯನ್ನು ಗುರುತಿಸಿ ಮನೆಯಿಂದ ಹೊರನಡೆಯಲು ಮುಂದಾದೆವು, ಆಗ ಮನೆಯ ಮುಖ್ಯದ್ವಾರದಲ್ಲಿ ಬೆಂಕಿ ಹತ್ತಿಕೊಂಡಿರುವುದು ಕಂಡಿತ್ತು. ನನಗೆ ಯೋಗೀಶ್ ಮೇಲೆ ಅನುಮಾನವಿದೆ. ಆತ ನನ್ನ ಮಗಳಿಗೆ ಸದಾ ಕಿರುಕುಳ ನೀಡುತ್ತಿದ್ದ" ಶಾರದಾ ಹೇಳಿದ್ದಾರೆ. ಶಾರದಾ ಹಾಗೂ ಆಕೆಯ ಪುತ್ರಿ ಜೋರಾಗಿ ಕ್ರುಚಿದಾಗ ನೆರೆಯವರು ಧಾವಿಸಿ ಬಂದು ಹೆಚ್ಚಿನ ಅನಾಹುತವಾಗುವುದರೊಳಗೆ ಬೆಂಕಿಯ್ತನ್ನು ನಂದಿಸಿದ್ದಾರೆ.
ಶಾದದಾ ಎಸ್ ಬಿಎಂ ಎಂಟರ್ ಪ್ರೈಸಸ್ ಎಂಬ ಪ್ಲೇಸ್ ಮೆಂಟ್ ಸಂಸ್ಥೆಯಲ್ಲಿ ಕಳೆದ ನಾಲ್ಕು ತಿಂಗಳಿಸ್ನಿಂಡ ಕೆಲಸ ಮಾಡುತ್ತಿದ್ದರು.ಆಕೆಯ ಪುತ್ರಿಯನ್ನು ಕಂಡ ಯೋಗೀಶ್ ಆಕೆಗೆ ತನ್ನನ್ನು ವಿವಾಹವಾಗೆಂದು ಕೇಳಿದ್ದ. ಆದರೆ ಶಾರದಾ ತನ್ನ ಪುತ್ರಿಗೆ ಅದಾಗಲೇ ಬೇರೊಬ್ಬನೊಡನೆ ನಿಶ್ಚಿತಾರ್ಥ್ಹ ಆಗಿದೆ ಎಂದು ಹೇಳಿದ್ದಾರೆ. ಆ ಬಳಿಕ ಯೋಗೀಶ್ ಯುವತಿಯನ್ನು ಹಿಂಬಾಲಿಸಿ ಪದೇ ಪದೇ ಮದುವೆಯಾಗಲು ಒತ್ತಾಯಿಸಿದ್ದ. ಅಲ್ಲದೆ ಯೋಗೀಶ್ ಒಮ್ಮೆ "ನೀವೇನಾದರೂ ಬೇರೆ ಮದುವೆಯಾದರೆ ನಿಮ್ಮಿಬ್ಬರನ್ನು ಜೀವಂತವಾಗಿರಲು ಬಿಡಲ್ಲ" ಎಂದು ಬೆದರಿಕೆ ಹಾಕಿದ್ದ.
ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ಮಧ್ಯರಾತ್ರಿ ಆಗಮಿಸಿದ್ದ ಯೋಗೀಶ್ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.ಬೆಂಕಿ ಹಚ್ಚಲು ಬಳಸಿದ ಪ್ರೆಟ್ರೋಲ್ ಬಾಟಲ್ ಮನೆ ಸಮೀಪದಲ್ಲೇ ದೊರಕಿದೆ."ಯೋಗೀಶ್ ಕಾಣೆಯಾಗಿದ್ದು ಆತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ ಬಳಿಕ ನಿಜವಾದ ಸಂಗತಿ ತಿಳಿಯಲಿದೆ. ಎಂದು ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


