ರಾಜ್ಯ

ಹತ್ತಿ ಬೆಳೆಯುವ ಧಾರವಾಡದ ಈ ಗ್ರಾಮದಲ್ಲಿ ತಲೆಯೆತ್ತಲಿದೆ ಐಐಟಿ!

ಇಲ್ಲಿನ ನಗರದಿಂದ 11 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕಮಾಲಿಗವಾಡ ಗ್ರಾಮದ ಬಗ್ಗೆ ಹಲವರು ...

ಹತ್ತಿ ಬೆಳೆಯುವ ಧಾರವಾಡದ ಈ ಗ್ರಾಮದಲ್ಲಿ ತಲೆಯೆತ್ತಲಿದೆ ಐಐಟಿ!
ಧಾರವಾಡದಲ್ಲಿ ನೂತನ ಐಐಟಿ ಕ್ಯಾಂಪಸ್ ಕಾಮಗಾರಿ ಪ್ರಗತಿಯಲ್ಲಿರುವುದು
Published On :
ಧಾರವಾಡ: ಇಲ್ಲಿನ ನಗರದಿಂದ 11 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕಮಾಲಿಗವಾಡ ಗ್ರಾಮದ ಹೆಸರು ಹಲವರು ಕೇಳಿರಲಿಕ್ಕಿಲ್ಲ. ಈ ಗ್ರಾಮದ ಜನಸಂಖ್ಯೆ ಕೇವಲ 4 ಸಾವಿರದ 600. ಹತ್ತಿ, ತೊಗರಿ ಬೆಳೆಯುವುದು ಮತ್ತು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಇಟ್ಟಿಗೆ ತಯಾರಿಸುವುದು ಈ ಗ್ರಾಮದ ಜನತೆಯ ಪ್ರಮುಖ ಕಸುಬು.
ಈ ಗ್ರಾಮ ಇನ್ನು ಎಲ್ಲರ ಬಾಯಲ್ಲಿ ಹರಿದಾಡಲಿದೆ. ಅದಕ್ಕೆ ಕಾರಣ ಹೊಸ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತಲೆಯೆತ್ತುತ್ತಿರುವುದು. ಧಾರವಾಡದ ನೂತನ ಐಐಟಿ ಸಂಸ್ಥೆ ಇಲ್ಲಿ ಸ್ಥಾಪನೆಯಾಗಲಿದೆ. 470.21 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿರುವ  ಐಐಟಿ ಕೇಂದ್ರಕ್ಕೆ ಕಳೆದ ವಾರ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿ ಹೋಗಿದ್ದರು. 
ಈ ಗ್ರಾಮ ಇತ್ತೀಚೆಗಷ್ಟೇ ಡಾಂಬರು ರಸ್ತೆ ಕಂಡಿದ್ದು. ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಇನ್ನು ಕೂಡ ಗ್ರಾಮಸ್ಥರನ್ನು ಕಾಡುತ್ತಿದೆ. ಆದರೆ ಇನ್ನು ಮುಂದೆ ಐಐಟಿ ಸ್ಥಾಪನೆಯಾಗಲಿರುವುದರಿಂದ ತಮ್ಮ ಗ್ರಾಮದ ಮೂಲಸೌಕರ್ಯ ಸುಧಾರಿಸಬಹುದು ಎಂಬ ಆಶಾವಾದದಲ್ಲಿ ಗ್ರಾಮಸ್ಥರಿದ್ದಾರೆ. 
ಎಂಜಿನಿಯರಿಂಗ್ ಕಾಲೇಜು ಬಂದರೆ ನಮಗೆ ಒಳ್ಳೆಯದಾಗಬಹುದು ಎಂದು ನಾವು ಜಮೀನು ಮಾರಾಟ ಮಾಡಲು ಮುಂದಾದೆವು ಎನ್ನುತ್ತಾರೆ ಗ್ರಾಮಸ್ಥರೊಬ್ಬರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.