ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ: ಖಾನಾಪುರದಲ್ಲಿ ರೈಲುಗಳ ನಿಲುಗಡೆ- ಅನಂತ್ ಕುಮಾರ್ ಹೆಗಡೆ
ಖಾನಾಪುರದಲ್ಲಿ ಫೆ.15ರಿಂದ ನಡೆಯಲಿರುವ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಯುಕ್ತ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳ ನಿಲುಗಡೆ ಮಾಡಲಾಗುತ್ತಿದ್ದು, ಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.

ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಫೆ.15ರಿಂದ ನಡೆಯಲಿರುವ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಯುಕ್ತ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳ ನಿಲುಗಡೆ ಮಾಡಲಾಗುತ್ತಿದ್ದು, ಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.
ಫೆಬ್ರವರಿ 15ರಿಂದ ಮಾರ್ಚ್ 5ರವರೆಗೆ ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವ ನೆರವೇರಲಿದ್ದು, ಲಕ್ಷಾಂತರ ಜನ ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಆದ್ದರಿಂದ ಈ ಮಾರ್ಗದಿಂದ ಹಾದು ಹೋಗುವ ತಡೆ ರಹಿತ ರೈಲುಗಳನ್ನು ನಿಲುಗಡೆ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ರೈಲು ನಿಲುಗಡೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು-ಅಜ್ಮಿರ್ ಗರಿಬ್ ನವಾಜ್ ಎಕ್ಸ್ ಪ್ರೆಸ್ (16532), ಅಜ್ಮಿರ್-ಬೆಂಗಳೂರು ಗರಿಬ್ ನವಾಜ್ (16531), ಬೆಂಗಳೂರು-ಭಗತ್ ಕಿ ಕೋಠಿ ಗರಿಬ್ ನವಾಜ್ (16534), ಭಗತ್ ಕಿ ಕೋಠಿ -ಬೆಂಗಳೂರು ಗರಿಬ್ ನವಾಜ್ (16533), ಪುಣೆ-ಎರ್ನಾಕುಲಂ ಎಕ್ಸಪ್ರೆಸ್ (11097), ಎರ್ನಾಕುಲಂ-ಪುಣೆ ಎಕ್ಸಪ್ರೆಸ್ (11098), ಮುನುಗುರು-ಛತ್ರಪತಿ ಸಾಹು ಮಹಾರಾಜ್ ಟರ್ಮಿನಲ್ ಕೊಲ್ಹಾಪುರ ಎಕ್ಸಪ್ರೆಸ್ (11303), ಹಾಗೂ ಛತ್ರಪತಿ ಸಾಹು ಮಹಾರಾಜ್ ಟರ್ಮಿನಲ್ ಕೊಲ್ಹಾಪುರ ಎಕ್ಸ ಪ್ರೆಸ್ (11304) ರೈಲುಗಳು ಖಾನಾಪುರ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ಹೆಗಡೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


