ಇಸ್ರೊದಿಂದ ನಾಳೆ ಜಿಸ್ಯಾಟ್-31 ಉಪಗ್ರಹ ಉಡಾವಣೆ
ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ನ್ನು ನಾಳೆ ಫ್ರಾನ್ಸ್ ನ ಗಯಾನ ಉಡ್ಡಯನ ಕೇಂದ್ರದಿಂದ...

ಬೆಂಗಳೂರು: ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ನ್ನು ನಾಳೆ ಫ್ರಾನ್ಸ್ ನ ಗಯಾನ ಉಡ್ಡಯನ ಕೇಂದ್ರದಿಂದ ಉಡಾಯಿಸಲಾಗುತ್ತಿದೆ. ಇಸ್ರೊ ಉಡಾಯಿಸುತ್ತಿರುವ ಅತಿ ತೂಕದ ಉಪಗ್ರಹಗಳಲ್ಲಿ ಇದು ಒಂದಾಗಿದ್ದು ದೇಶದಲ್ಲಿ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಜಿಸ್ಯಾಟ್ -31 ಅಥವಾ ಜಿಯೊಸ್ಟೇಷನರಿ-31 2 ಸಾವಿರದ 535 ಕೆಜಿ ತೂಕವನ್ನು ಹೊಂದಿದ್ದು ಈಗಾಗಲೇ ಕಕ್ಷೆಯಲ್ಲಿರುವ ಕೆಲವು ಹಳೆಯ ಉಪಗ್ರಹಗಳನ್ನು ಇದು ಬದಲಾಯಿಸಲಿದೆ. ಏರಿಯನ್-5 ಉಡ್ಡಯನ ವಾಹಕದ ಮೂಲಕ ನಾಳೆ ನಸುಕಿನ ಜಾವ 2.31 ಗಂಟೆಗೆ ಉಡಾಯಿಸಲಾಗುತ್ತಿದೆ.
ಈ ಉಪಗ್ರಹದ ಜೀವಿತಾವಧಿ 15 ವರ್ಷಗಳು. ವಿಸ್ಯಾಟ್(ನೆರಿ ಸ್ಮಾಲ್ ಅಪೆರ್ಚರ್ ಟರ್ಮಿನಲ್)ನ ನೆಟ್ ವರ್ಕ್, ಟೆಲಿವಿಷನ್ ಸಂಪರ್ಕ, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ, ಡಿಟಿಎಚ್ ದೂರದರ್ಶನ ಸೇವೆ, ಸೆಲ್ಯುಲ್ಲರ್ ಸಂಪರ್ಕ ಇತ್ಯಾದಿ ಸೇವೆಗಳಿಗೆ ಈ ಸ್ಯಾಟಲೈಟನ್ನು ಬಳಸಲಾಗುತ್ತದೆ.
ಕಳೆದ ಜನವರಿ 24ರಂದು ಪಿಎಸ್ಎಲ್ ವಿ ಸಿ-44 ನ್ನು ಉಡಾಯಿಸಿದ ನಂತರ ಇಸ್ರೊ 2019ರಲ್ಲಿ ಉಡಾಯಿಸುತ್ತಿರುವ ಎರಡನೇ ಉಪಗ್ರಹ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


