ಪೊಲೀಸ್ ಪೇದೆ ಜೀವ ರಕ್ಷಿಸಿದ ಬಿಎಂಟಿಸಿ ಚಾಲಕ- ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ!
ಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್. ಗಂಗಾಧರ್ ಮತ್ತು ...

Published On :
ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್. ಗಂಗಾಧರ್ ಮತ್ತು ನಿರ್ವಾಹಕ ಟಿ. ಶ್ರೀನಿವಾಸ್ ಅವರನ್ನು ಇಡೀ ರಾಜ್ಯದ ಜನತೆ ಪ್ರಶಂಸಿತ್ತು,
ಹಾಸ್‌ಮ್ಯಾಟ್ ಆಸ್ಪತ್ರೆ ಈ ವರ್ಷದ ಹಾಸ್ ಮ್ಯಾಟ್ ಪರೋಪಕಾರಿ ಪ್ರಶಸ್ತಿ ಪ್ರಕಟಿಸಿದ್ದು ಅಪಘಾತದಲ್ಲಿ ಮಾನವೀಯತೆ ಮೆರೆದ ಬಿಎಂಟಿಸಿ ಬಸ್ ಚಾಲಕ ವೈ.ಎನ್.ಗಂಗಾಧರ್ ಮತ್ತು ನಿರ್ವಾಹಕ ಟಿ.ಶ್ರೀನಿವಾಸ್ ಉತ್ತಮ ಪರೋಪಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಡಿ. 29ರ ರಾತ್ರಿ ಕೆಲಸ ಮುಗಿಸಿಕೊಂಡು ಹೋಗುವಾಗ ಯಲಹಂಕ - ನೆಲಮಂಗಲ ಮಾರ್ಗದಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಪೇದೆ ಸಿದ್ದರಾಜು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಿದ್ದ ಅವರನ್ನು ಜನರು ನೋಡಿಕೊಂಡು ಹೋಗುತ್ತಿದ್ದರು ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ. ಎಲ್ಲರೂ ವಿಡಿಯೋ ಮಾಡಿಕೊಳ್ಳುತ್ತಿದ್ದರು,
ಈ ಸಮಯದಲ್ಲಿ ರೂಟ್ ನಂ. 407 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್ ಮತ್ತು ಶ್ರೀನಿವಾಸ್ ಸಿದ್ದರಾಜು ಸ್ಥಿತಿ ನೋಡಿ, ಬಸ್‌ನಲ್ಲಿಯೇ ಸಿದ್ದರಾಜು ಅವರನ್ನು ಆಸ್ಪತ್ರೆಗೆ ಕರೆದು ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BMTCಬಿಎಂಟಿಸಿdriverಚಾಲಕಪೊಲೀಸ್ ಪೇದೆconductorನಿರ್ವಾಹಕPolice constableGood Samaritan awardHosmat Hospitalಪರೋಪಕಾರಿ ಪ್ರಶಸ್ತಿಹಾಸ್ ಮ್ಯಾಟ್ ಆಸ್ಪತ್ರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


