ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: ಹಿಂಸಾಚಾರಕ್ಕೆ ಮಂಗಳೂರೇ ಗುರಿಯಾಗಿದ್ದು ಏಕೆ?
ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪೂರ್ವ ಯೋಜಿತ ಎಂದು ಪೊಲೀಸರು ಹೇಳುತ್ತಿದ್ದು ತಜ್ಞರು ಹೇಳುವ ಪ್ರಕಾರ ಇದರಲ್ಲಿ ಅನೇಕ ವಿಷಯಗಳು ಅಡಗಿವೆ. ಹಲವು ವಿಷಯಗಳು ಇಂತಹ ಘಟನೆಗಳು ನಡೆಯಲು ಪ್ರೇರಣೆಯಾಗುತ್ತದೆ ಎನ್ನುತ್ತಾರೆ.ಈ ವಿಚಾರದಲ್ಲಿ ಸರ್ಕಾರಗಳು ಕೂಡ ಹೊಣೆಯಾಗುತ್ತವೆ.

ಬೆಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ) ವಿರುದ್ಧ ಕಳೆದ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕಿಳಿದು ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟ ನಂತರ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುವ ಪ್ರಶ್ನೆ ಮಂಗಳೂರಿನಲ್ಲಿಯೇ ಈ ರೀತಿ ಹಿಂಸಾಚಾರ ಆಗಿದೆ ಏಕೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗದಲ್ಲಿ ಪ್ರತಿಭಟನೆ ಮಂಗಳೂರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರೂ ಮಂಗಳೂರು ಏಕೆ ಗುರಿಯಾಯಿತು ಎಂಬುದು.
ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪೂರ್ವ ಯೋಜಿತ ಎಂದು ಪೊಲೀಸರು ಹೇಳುತ್ತಿದ್ದು ತಜ್ಞರು ಹೇಳುವ ಪ್ರಕಾರ ಇದರಲ್ಲಿ ಅನೇಕ ವಿಷಯಗಳು ಅಡಗಿವೆ. ಹಲವು ವಿಷಯಗಳು ಇಂತಹ ಘಟನೆಗಳು ನಡೆಯಲು ಪ್ರೇರಣೆಯಾಗುತ್ತದೆ ಎನ್ನುತ್ತಾರೆ.ಈ ವಿಚಾರದಲ್ಲಿ ಸರ್ಕಾರಗಳು ಕೂಡ ಹೊಣೆಯಾಗುತ್ತವೆ.
ಮಂಗಳೂರಿನಲ್ಲಿ ಹಿಂದೂ-ಮುಸ್ಲಿಂ ಎಂಬ ಸೂಕ್ಷ್ಮ ವಿಚಾರ ಬಹಳ ಹಿಂದಿನಿಂದಲೂ ಇದೆ. ಮುಸಲ್ಮಾನರನ್ನು ದೂರವಾಗಿಸುವಿಕೆ, ರಾಜಕೀಕರಣ, ಪೊಲೀಸ್ ಪಡೆಯ ಕೋಮುವಾದೀಕರಣ ಮತ್ತು ಗುಪ್ತಚರ ವೈಫಲ್ಯ ಇವುಗಳೆಲ್ಲವೂ ಮಂಗಳೂರು ಹಿಂಸಾಚಾರಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಇಂತಹ ಘಟನೆಗಳು ಪುನರಾವರ್ತಿಸಿದಾಗ ರಾಜಕೀಯ ನಾಯಕರು ಪರಸ್ಪರ ಆರೋಪ ಮಾಡುವುದರಲ್ಲಿ ನಿರತರಾಗಿರುತ್ತಾರೆಯೇ ವಿನಃ ಸಮಸ್ಯೆಯ ಮೂಲವೇನು, ಅದಕ್ಕೆ ಶಾಶ್ವತ ಪರಿಹಾರವೇನು ಎಂದು ಕಂಡುಕೊಳ್ಳಲು ಹೋಗುವುದಿಲ್ಲ.
ಎಸಿಪಿಯಾಗಿ ನಿವೃತ್ತರಾಗಿರುವ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಾದ ಶಿವಾಜಿನಗರ, ಕಲಾಸಿಪಾಳ್ಯದಂತಹ ಸ್ಥಳಗಳಲ್ಲಿ ಕೆಲಸ ಮಾಡಿದ ಬಿ ಬಿ ಅಶೋಕ್ ಕುಮಾರ್ ಎಂಬುವವರು, ಮಂಗಳೂರು ನಗರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹುದ್ದೆ ವಹಿಸಿಕೊಂಡ ಇನ್ಸ್ ಪೆಕ್ಟರ್ ಗಳು ನ್ಯಾಯಸಮ್ಮತವಾಗಿರಬೇಕು, ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬಹುಜನರು ತಮ್ಮ ಪ್ರದೇಶದ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡರೆ ಕಷ್ಟದ ಪರಿಸ್ಥಿತಿಯಲ್ಲಿ ವಿಷಯ ಕೈಮೀರಿ ಹೋಗುತ್ತದೆ. ಹಲವು ಕೇಸುಗಳಲ್ಲಿ ಪೊಲೀಸರು ತಮ್ಮ ಕರ್ತವ್ಯವನ್ನು ನ್ಯಾಯಸಮ್ಮತವಾಗಿ ಮತ್ತು ನಿಸ್ಪಕ್ಷಪಾತವಾಗಿ ನೀಡುವಲ್ಲಿ ವಿಫಲರಾಗುತ್ತಾರೆ, ಏಕೆಂದರೆ ಅವರು ಶಾಸಕರು, ಸಂಸದರ ಶಿಫಾರಸು ಮೇರೆಗೆ ಆ ಪ್ರದೇಶಕ್ಕೆ ವರ್ಗಗೊಂಡಿರುತ್ತಾರೆ ಎನ್ನುತ್ತಾರೆ.
ದಕ್ಷಿಣ ಕನ್ನಡದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ಎಸ್ಪಿಯಾಗಿ ನಿವೃತ್ತಗೊಂಡಿರುವ ಆನಂದ್, ಗುಪ್ತಚರ ಇಲಾಖೆ ಸಿಬ್ಬಂದಿ ಬಲಿಷ್ಠವಾಗಿದ್ದರೆ ಇಂತಹ ಘಟನೆಗಳನ್ನು ತಡೆಯಬಹುದು ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


