ಪ್ರಾಣಕ್ಕೆ ಕುತ್ತು ತಂದ ಮೊಬೈಲ್ ಮಾತು, ತನ್ನದೇ ರೋಡ್ ರೋಲರ್ ಹರಿದು ಚಾಲಕನ ಸಾವು!
ಸಾವು ಹೇಗೆಲ್ಲಾ ಹಿಂಬಾಲಿಸುತ್ತದೆ ಎಂಬುದಕ್ಕೆ ಈ ಸುದ್ದಿ ಸ್ಪಷ್ಟ ಸಾಕ್ಷಿಯಾಗಿದ್ದು, ರಸ್ತೆ ಕಾಮಗಾರಿಗಾಗಿ ತರಲಾಗಿದ್ದ ರೋಡ್ ರೋಲರ್ ವೊಂದು ತನ್ನದೇ ಚಾಲಕನನ್ನು ಆಕಸ್ಮಿಕವಾಗಿ ಬಲಿತೆಗೆದುಕೊಂಡಿದೆ.

ಕೊಪ್ಪಳ: ಸಾವು ಹೇಗೆಲ್ಲಾ ಹಿಂಬಾಲಿಸುತ್ತದೆ ಎಂಬುದಕ್ಕೆ ಈ ಸುದ್ದಿ ಸ್ಪಷ್ಟ ಸಾಕ್ಷಿಯಾಗಿದ್ದು, ರಸ್ತೆ ಕಾಮಗಾರಿಗಾಗಿ ತರಲಾಗಿದ್ದ ರೋಡ್ ರೋಲರ್ ವೊಂದು ತನ್ನದೇ ಚಾಲಕನನ್ನು ಆಕಸ್ಮಿಕವಾಗಿ ಬಲಿತೆಗೆದುಕೊಂಡಿದೆ.
ಕೊಪ್ಪಳದ ಗಂಗಾವತಿ ನಗರದ ಹೊರವಲಯ ಸಂಗಪುರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಚಾಲಕನನ್ನು ಇಲ್ಲಿನ ನೀಲಕಂಠೇಶ್ವರ ವೃತ್ತದ ಪ್ರದೇಶದ ನಿವಾಸಿಸುವ ಸುರೇಶ್ ಐಲಿ (35 ವರ್ಷ) ಎಂದು ಗುರುತಿಸಲಾಗಿದೆ.
ಇಲ್ಲಿನ ಸಂಗಪುರದಿಂದ ಗಂಗಾವತಿಗೆ ಬರುವಾಗ ಕಣಿವೆ ಆಂಜನೇಯ ದೇಗುಲದ ಬಳಿಯ ಇಳಿಜಾರು ಪ್ರದೇಶದಲ್ಲಿ ಸುರೇಶ್ ಮೊಬೈಲ್ ಅಲ್ಲಿ ಮಾತನಾಡಿಕೊಂಡು ವಾಹನವನ್ನು ನ್ಯೂಟ್ರಲ್ ಮಾಡಿದ್ದಾರೆ. ಈ ವೇಳೆ ವಾಹನದ ನಿಯಂತ್ರಣ ಸಿಗದ ಹಿನ್ನೆಲೆ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದೆ. ಆಗ ಗಾಬರಿಗೊಂಡ ಸುರೇಶ್ ಬೀಳುವ ಆತಂಕದಿಂದ ವಾಹನದಿಂದ ಜಿಗಿದಿದ್ದಾರೆ. ಅತ್ತ ಸುರೇಶ್ ಜಿಗಿದ ಕೂಡಲೇ ರೋಲರ್ ಅವರ ಹರಿದಿದೆ.
ಪರಿಣಾಮ ಚಾಲಕ ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ರೋಡ್ ರೋಲರ್ ಅನ್ನು ಮೇಲೆತ್ತಿ ಚಾಲಕನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಅದು ಸಫಲವಾಗಿಲ್ಲ. ಅಷ್ಟು ಹೊತ್ತಿಗಾಗಲೇ ಚಾಲಕ ಸುರೇಶ್ ನ ಪ್ರಾಣ ಪಕ್ಷಿ ಹಾರಿಹೋಗಿದೆ.
ಇನ್ನು ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


