ಕಲಬುರಗಿ: ಸೂರ್ಯ ಗ್ರಹಣದ ವೇಳೆ ಮಕ್ಕಳನ್ನು ಕುತ್ತಿಗೆ ವರೆಗೂ ಹೂತಿದ್ದ ಪೋಷಕರು!
ಶತಮಾನದ ಸೂರ್ಯ ಗ್ರಹಣ ಮುಕ್ತಾಯಗೊಂಡಿದೆ. ಈ ಗ್ರಹಣ ಕೆಲವು ವಿಚಿತ್ರ ಆಚರಣೆಗಳು ಇನ್ನೂ ಚಾಲ್ತಿಯಲ್ಲಿರುವುದನ್ನು ಬೆಳಕಿಗೆ ತಂದಿದೆ.

ಕಲಬುರ್ಗಿ: ಶತಮಾನದ ಸೂರ್ಯ ಗ್ರಹಣ ಮುಕ್ತಾಯಗೊಂಡಿದೆ. ಈ ಗ್ರಹಣ ಕೆಲವು ವಿಚಿತ್ರ ಆಚರಣೆಗಳು ಇನ್ನೂ ಚಾಲ್ತಿಯಲ್ಲಿರುವುದನ್ನು ಬೆಳಕಿಗೆ ತಂದಿದೆ.
ಕಲಬುರ್ಗಿ ಜಿಲ್ಲೆ ತಾಜ್ಸುಲ್ತಾನ್ ಪುರ ಗ್ರಾಮದಲ್ಲಿ ಗ್ರಹಣದ ವೇಳೆ ಮಕ್ಕಳನ್ನು ಕುತ್ತಿಗೆ ವರೆಗೂ ಮಣ್ಣಲ್ಲಿ ಹೂತಿದ್ದು ವರದಿಯಾಗಿದೆ. ಸಂಜನಾ (4), ಪೂಜಾ ಕ್ಯಾಮಲಿಂಗ (6) ಕಾವೇರಿ (11) ಈ ಮೂವರು ಮಕ್ಕಳನ್ನು ಗ್ರಹಣದ ವೆಳೆ ಮಣ್ಣಲ್ಲಿ ಕುತ್ತಿಗೆವರೆಗೂ ಹೂಳಲಾಗಿತ್ತು.
ಈ ಮೂರು ಮಕ್ಕಳು ವಿಶೇಷ ಚೇತನರಾಗಿದ್ದು, ಗ್ರಹಣದ ವೇಳೆ ಈ ರೀತಿ ಮಾಡಿದರೆ ಅಂಗಾಂಗಗಳ ಸಮಸ್ಯೆ ಹೋಗಲಾಡಿಸುವುದು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಈ ಕೃತ್ಯ ಎಸಗಿದ್ದಾರೆ. ಇನ್ನು ಚಿಂಚೋಳಿ ತಾಲೂಕಿನಲ್ಲಿಯೂ ಇಂಥಹದ್ದೇ ಘಟನೆ ನಡೆದಿದ್ದು, 4 ಮಕ್ಕಳನ್ನು ಕುತ್ತಿಗೆ ವರೆಗೂ ಹೂಳಲಾಗಿತ್ತು. ವರದಿಗಳ ಪ್ರಕಾರ ಜನವಾದಿ ಮಹಿಳಾ ಸಂಘಟನೆ ಈ ಕೃತ್ಯವನ್ನು ಪ್ರತಿಭಟಿಸಿ ಭಾಗಶಃ ಹೂಳಲಾಗಿದ್ದ ಮಕ್ಕಳನ್ನು ಮೇಲೆತ್ತಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಉಪಜಿಲ್ಲಾಧಿಕಾರಿ ಬಿ ಶರತ್, ತಹಶಿಲ್ದಾರರನ್ನು ಸ್ಥಳಕ್ಕೆ ಕಳಿಸಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರ ವಿರುದ್ಧ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


