ರಾಜ್ಯ

ಗುಂಡ್ಲುಪೇಟೆ: ಬಸ್​ ಹತ್ತುವಾಗ ಪ್ರಯಾಣಿಕನಿಂದ 2 ಲಕ್ಷ ಹಣ ಎಗರಿಸಿದ್ದ ಮೂವರು ಅಂದರ್

ಬಸ್​​​ ಹತ್ತುವಾಗ ಪ್ರಯಾಣಿಕನೋರ್ವನ ಲಕ್ಷಾಂತರ ರೂ. ಎಗರಿಸಿದ್ದ ಮೂವರು ಖತರ್ನಾಕ್ ಕಳ್ಳರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

ಗುಂಡ್ಲುಪೇಟೆ: ಬಸ್​ ಹತ್ತುವಾಗ ಪ್ರಯಾಣಿಕನಿಂದ 2 ಲಕ್ಷ ಹಣ ಎಗರಿಸಿದ್ದ ಮೂವರು ಅಂದರ್
ಪೊಲೀಸರು
Published On :

ಚಾಮರಾಜನಗರ: ಬಸ್​​​ ಹತ್ತುವಾಗ ಪ್ರಯಾಣಿಕನೋರ್ವನ ಲಕ್ಷಾಂತರ ರೂ. ಎಗರಿಸಿದ್ದ ಮೂವರು ಖತರ್ನಾಕ್ ಕಳ್ಳರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಮೊಹಮ್ಮದ್ ಅರೀಫ್, ಅಸ್ಗರ್ ಪಾಷಾ, ನದೀಮ್ ಪಾಷಾ ಬಂಧಿತ ಆರೋಪಿಗಳು. ಡಿ.11ರಂದು ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ‌ ಮೈಸೂರಿನ ಬಸ್ ಹತ್ತುವ ವೇಳೆ ದಿಲೀಪ್ ಎಂಬಾತನನ್ನು ಗುರಿಯಾಗಿಸಿಕೊಂಡು ತಳ್ಳಾಟ, ನೂಕಾಟ ಸೃಷ್ಟಿಸಿ ಬರೋಬ್ಬರಿ 2 ಲಕ್ಷ ರೂ.‌ ಎಗರಿಸಿದ್ದರು.‌‌

ಈ‌ ಸಂಬಂಧ‌ ದಿಲೀಪ್ ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.‌ ಕ್ರೈಂ ಪಿಎಸ್​​ಐ ಲಕ್ಷ್ಮೀನಾರಾಯಣ, ಸಿಬ್ಬಂದಿಯಾದ ಶಂಭು, ಮಹೇಶ್, ನಾಗೇಶ್ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.