ರಾಜ್ಯ

ಬಿಎಂಟಿಸಿ ರಾಯಭಾರಿಯಾಗಿ ಪುನೀತ್ ರಾಜ್ ಕುಮಾರ್ ಆಯ್ಕೆ 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹಿಂದೆ ಸರ್ಕಾರದ ಹಲವು ಸಂಸ್ಥೆಗಳಿಗೆ, ಕರ್ನಾಟಕ ಸರ್ಕಾರದ ಹಲವು ಯೋಜನೆಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.

ಬಿಎಂಟಿಸಿ ರಾಯಭಾರಿಯಾಗಿ ಪುನೀತ್ ರಾಜ್ ಕುಮಾರ್ ಆಯ್ಕೆ 
ಬಿಎಂಟಿಸಿ ಅಧಿಕಾರಿಗಳ ಜೊತೆ ನಟ ಪುನೀತ್ ರಾಜ್ ಕುಮಾರ್
Published On :

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹಿಂದೆ ಸರ್ಕಾರದ ಹಲವು ಸಂಸ್ಥೆಗಳಿಗೆ, ಕರ್ನಾಟಕ ಸರ್ಕಾರದ ಹಲವು ಯೋಜನೆಗಳಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಅದನ್ನೀಗ ಮತ್ತೆ ಮುಂದುವರಿಸಿಕೊಂಡು ಹೋಗಿರುವ ಅವರು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ರಾಯಭಾರಿಯಾಗಿದ್ದಾರೆ. 


ಬೆಂಗಳೂರು ಮಹಾನಗರದ ರಸ್ತೆಗಳ ಟ್ರಾಫಿಕ್ ಜಾಮ್, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖಾಸಗಿ ವಾಹನಗಳ ಬಳಕೆಯಿಂದ ಸಾರ್ವಜನಿಕರು ಸಂಚರಿಸಲು ಬಹಳ ಕಷ್ಟಪಡುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟು ಬಳಸಿ ಜನರು ಸಹಕರಿಸುವಂತೆ ಸರ್ಕಾರ, ಮಹಾನಗರ ಸಾರಿಗೆ ನಿಗಮ ಮನವಿ ಮಾಡಿಕೊಳ್ಳುತ್ತಲೇ ಬಂದಿದೆ. 


ಈ ನಿಟ್ಟಿನಲ್ಲಿ ಜನರನ್ನು ಪ್ರೇರೇಪಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಎಂಟಿಸಿ ರಾಯಭಾರಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.