ಚಾಮರಾಜನಗರ: ಕಾಡ್ಗಿಚ್ಚು ತಡೆಗಟ್ಟಲು ಫೈರ್ ಲೈನ್ ಕೆಲಸ ಆರಂಭ
ಕಾಡಿಗೆ ಕಂಟಕ ಪ್ರಾಯವಾದ ಬೆಂಕಿ ತಡೆಗೆಟ್ಟಲು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾಡುವ ಫೈರ್ ಲೈನ್ ಕಟಿಂಗ್ ಬಹುತೇಕ ಪೂರ್ಣವಾಗಿದ್ದು, ಈ ಬಾರಿ ಸಂರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ.

ಬಿಳಿಗಿರಿರಂಗನಬೆಟ್ಟ ಹಾಗೂ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾರ್ಯ
ಚಾಮರಾಜನಗರ: ಕಾಡಿಗೆ ಕಂಟಕ ಪ್ರಾಯವಾದ ಬೆಂಕಿ ತಡೆಗೆಟ್ಟಲು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾಡುವ ಫೈರ್ ಲೈನ್ ಕಟಿಂಗ್ ಬಹುತೇಕ ಪೂರ್ಣವಾಗಿದ್ದು, ಈ ಬಾರಿ ಸಂರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ.
ಬೇಸಿಗೆ ಬಂತೆಂದರೆ ಕಾಡಿಗೆ ಕಂಟಕ ಪ್ರಾಯವಾದ ಬೆಂಕಿ ತಡೆಗೆಟ್ಟಲು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾಡುವ ಫೈರ್ ಲೈನ್ ಕಟಿಂಗ್ ಬಹುತೇಕ ಪೂರ್ಣವಾಗಿದೆ. ಬಿಆರ್ಟಿ ಮತ್ತು ಬಂಡೀಪುರದಲ್ಲಿ ಫೈರ್ ಲೈನ್ ಕಟಿಂಗ್ ಬಹುತೇಕ ಪೂರ್ಣ!ಅರಣ್ಯದೊಳಗಿನ ಗೇಮ್ ರಸ್ತೆಗಳು, ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ 5-10 ಮೀ. ಅಗಲಕ್ಕೆ ಕಾಡಿನ ಕಳೆ ತೆಗೆಯಲಾಗುತ್ತಿದ್ದು ಒಣಗಿದ ಬಳಿಕ ಸುಡಲಿದ್ದಾರೆ. ಈಗಾಗಲೇ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಟಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಜ.15ರೊಳಗೆ ಕಳೆಗಿಡಗಳನ್ನು ಸುಟ್ಟು ಬೆಂಕಿ ಬೀಳದಂತೆ ಕಟ್ಟೆಚ್ಚರ ವಹಿಸಲಿದ್ದಾರೆ.
ಕಳೆದ 15 ವರ್ಷದಲ್ಲಿ ಪದೇ-ಪದೆ ಬೆಂಕಿಗೆ ಬೀಳುತ್ತಿರುವ ಪ್ರದೇಶಗಳಾವುವು ಮತ್ತು ಆಗ ಕೈಗೊಂಡಿದ್ದ ಕ್ರಮಗಳೇನು ಎಂಬುದನ್ನೆಲ್ಲ ಒಗ್ಗೂಡಿಸಿ ಈ ಬಾರಿ ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಬೆಂಕಿ ರೇಖೆ ನಿರ್ಮಾಣ ಮಾಡುತ್ತಿದೆ. ಕಳೆದ ಬಾರಿ ಬಂಡೀಪುರ ಧಗಧಗಿಸಲು ವ್ಯವಸ್ಥಿತವಾದ ಬೆಂಕಿ ರೇಖೆ ಇಲ್ಲದಿರುವುದೇ ಮುಖ್ಯ ಕಾರಣವಾಗಿದ್ದರಿಂದ ಕಳೆದ ಬಾರಿ ಬೆಂಕಿ ಬಿದ್ದಿದ್ದ ಪ್ರದೇಶದಲ್ಲಿ ಇದೀಗ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2,550 ಕಿ.ಮೀ ಹಾಗೂ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ 1000 ಕಿ.ಮೀ.ಗೂ ಹೆಚ್ಚು ಬೆಂಕಿ ರೇಖೆಯನ್ನು ನಿರ್ಮಾಣ ಮಾಡಲಾಗಿದೆ.
-ಗೂಳಿಪುರ ನಂದೀಶ ಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


