ರಾಜ್ಯ

ಬೆಂಗಳೂರು: ಗೆಳತಿಯ ಖಾಸಗಿ ಫೋಟೋ ಶೇರ್ ಮಾಡಿ ಬ್ಲಾಕ್‍ಮೇಲ್ ಮಾಡಿದ್ದ ಆರೋಪಿ ಅಂದರ್​

ತನ್ನ ಗೆಳತಿಯ ಖಾಸಗಿ ಫೋಟೊಗಳನ್ನು ಅನ್ಯರೊಡನೆ ಶೇರ್ ಮಾಡಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೈಂ ಬ್ರ್ಯಾಂಚ್ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಗೆಳತಿಯ ಖಾಸಗಿ ಫೋಟೋ ಶೇರ್ ಮಾಡಿ ಬ್ಲಾಕ್‍ಮೇಲ್ ಮಾಡಿದ್ದ ಆರೋಪಿ ಅಂದರ್​
ಆರೋಪಿ ಕಿರಣ್
Published On :

ಬೆಂಗಳೂರು: ತನ್ನ ಗೆಳತಿಯ ಖಾಸಗಿ ಫೋಟೊಗಳನ್ನು ಅನ್ಯರೊಡನೆ ಶೇರ್ ಮಾಡಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೈಂ ಬ್ರ್ಯಾಂಚ್ ಪೋಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಚಿಕ್ಕಬಾಣಸವಾಡಿಯ ಈರಪ್ಪ ಲೇಔಟ್ ನಿವಾಸಿ ಕಿರಣ್(23) ಎಂದು ಗುರುತಿಸಲಾಗಿದ್ದು ಈತ ಕಳೆದೆರಡು ವರ್ಷಗಳಿಂದಬಾಣಸವಾಡಿಯ ಹೇರ್‍ಸೆಲ್ಯೂನ್‍ನಲ್ಲಿ ಕೆಲಸದಲ್ಲಿದ್ದ. ಈ ಸಮಯದಲ್ಲಿ ಯುವತಿಯೊಡನೆ ಪರಿಚಯ ಮಾಡಿಕೊಂಡಿದ್ದ ಈತ ಆಕೆಯೊಡನೆ ಸ್ನೇಹ ಬೆಳೆಸಿದ್ದ.

ಈ ಮಧ್ಯೆ ಯುವತಿಯ ಮೊಬೈಲ್ ನಲ್ಲಿ ತೆಗೆದ ಆಕೆಯ ಚಿತ್ರವನ್ನು ತನ್ನ ಮೊಬೈಲ್ ಗೆ ಶೇರ್ ಮಾಡಿಕೊಂಡಿದ್ದ , ಆದರೆ ಇತ್ತೀಚೆಗೆ ಆರೋಪಿ ಕಿರಣ್ ಜತೆ ಯುವತಿಗೆ ಮನಸ್ತಾಪ ಉಂಟಾಗಿದ್ದು ಆಕೆ ಅವನೊಂದಿಗಿಒನ ಸ್ನೇಹಕ್ಕೆ ಮಂಗಳ ಹಾಡಿದ್ದಳು. ಆದರೆ ಕಿರಣ್ ಮಾತ್ರ ಯುವತಿಯ ಖಾಸಗಿ ಫೋಟೋಗಳನ್ನು ಅನ್ಯರಿಗೆ ಶೇರ್ ಮಾಡಿದ್ದಾನೆ. ಅಲ್ಲದೆ ಆಕೆಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಯುವತಿ ಸೈಬರ್ ಪೋಲೀಸರಲ್ಲಿ ದೂರು ಸಲ್ಲಿಸಿದ್ದು ತನಿಖೆ ನಡೆಸಿದ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.