ರಾಜ್ಯ

ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸಿದ ವಿದ್ಯಾರ್ಥಿನಿ

ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸುವ ಮೂಲಕ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇತರರಿಗೆ ಮಾದರಿಯಾಗಿದ್ದಾಳೆ.

ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸಿದ ವಿದ್ಯಾರ್ಥಿನಿ
ಪ್ರವಾಹ ಸಂತ್ರಸ್ತರು
Published On :

ವಿಜಯಪುರ: ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸುವ ಮೂಲಕ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇತರರಿಗೆ ಮಾದರಿಯಾಗಿದ್ದಾಳೆ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸುನಿಲ್ ಗೌಡ ಪಾಟೀಲ ಅವರ ಪುತ್ರಿ ಸಾನ್ವಿ, ಬಿ. ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಬಾಗಲಕೋಟೆಯಲ್ಲಿ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಆಕೆ ಪ್ರಥಮ ಸ್ಥಾನ ಪಡೆದಿದ್ದಳು. 

ಚಾಂಪಿಯನ್ ಶಿಪ್ ಪಡೆದ 5 ಸಾವಿರ ರೂಪಾಯಿ ಬಹುಮಾನದಿಂದ ತೊಟ್ಟಿಲು ಖರೀದಿಸಿ, ಮುದ್ದೆಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಪ್ರವಾಹ ಸಂತ್ರಸ್ತರ ಕೇಂದ್ರಗಳಲ್ಲಿರುವ ಹಸುಗೂಸುಗಳಿಗೆ ಕೊಡುವ ಮೂಲಕ ಸಾನ್ವಿ ಮಾದರಿಯಾಗಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.