ರಾಜ್ಯ

ಬೆಂಗಳೂರು: ಪತ್ನಿ, ಮಗಳ ಸ್ನಾನದ ವಿಡಿಯೋ ಸೆರೆಹಿಡಿಯುತ್ತಿದ್ದ ಪಾಪಿ ಗಂಡ!

ನನ್ನ ಗಂಡ ಹಲವು ವರ್ಷಗಳಿಂದ ನಮಗೆ ತಿಳಿಯದಂತೆ ನನ್ನ ಮತ್ತು ನನ್ನ ಮಗಳು ಸ್ನಾನ ಮಾಡುವುದು ಹಾಗೂ ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡುತ್ತಿದ್ದು ಸುಮ್ಮನಿರದಿದ್ದರೆ...

ಬೆಂಗಳೂರು: ಪತ್ನಿ, ಮಗಳ ಸ್ನಾನದ ವಿಡಿಯೋ ಸೆರೆಹಿಡಿಯುತ್ತಿದ್ದ ಪಾಪಿ ಗಂಡ!
ಸಂಗ್ರಹ ಚಿತ್ರ
Published On :
ಬೆಂಗಳೂರು: ನನ್ನ ಗಂಡ ಹಲವು ವರ್ಷಗಳಿಂದ ನಮಗೆ ತಿಳಿಯದಂತೆ ನನ್ನ ಮತ್ತು ನನ್ನ ಮಗಳು ಸ್ನಾನ ಮಾಡುವುದು ಹಾಗೂ ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡುತ್ತಿದ್ದು ಸುಮ್ಮನಿರದಿದ್ದರೆ ಅದನ್ನು ಸೆಕ್ಸ್ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪತ್ನಿ ದೂರು ನೀಡಿದ್ದಾರೆ.
ಬೆಂಗಳೂರಿನ ಆಡುಗೋಡಿಯಲ್ಲಿ ನೆಲೆಸಿರುವ 45 ವರ್ಷದ ಮಹಿಳೆ ನನ್ನ ಗಂಡ 2012ರಿಂದ ನಮಗೆ ತಿಳಿಯದಂತೆ ನಾನು ಸ್ನಾನ ಮಾಡುವುದು ಮತ್ತು ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಅದು ತಿಳಿದು ಆತನಿಗೆ ನೀನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಕ್ಕೆ ಜಾಸ್ತಿ ಮಾತನಾಡಿದರೆ ನಿಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ಅಲ್ಲದೆ ನನ್ನ ಮಗಳು ಬಟ್ಟೆ ಬದಲಿಸುವ ಹಾಗೂ ಸ್ನಾನ ಮಾಡುವುದನ್ನು ಸೆರೆಹಿಡಿದಿದ್ದಾನೆ. ಆತ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ. ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ನಾನು ಪ್ರಶ್ನಿಸಿದ್ದೆ. ಅಲ್ಲದೆ ಆತ ಬದಲಾಗಬಹುದು ಎಂದು ನಾನು ಭಾವಿಸಿದ್ದೆ ಆದರೆ ಆತನ ಉಪಟಳ ಇನ್ನೂ ಜಾಸ್ತಿಯಾಗಿದ್ದರಿಂತ ಪೊಲೀಸರಿಗೆ ದೂರು ನೀಡುವ ನಿರ್ಧಾರ ಮಾಡಿದ್ದಾಗಿ ಮಹಿಳೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.