ಮಂಡ್ಯ: ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನ
ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜಿ. ವಿ. ಡಿ ಎಂಬ ಕಾವ್ಯಾನಾಮದಿಂದ ಹೆಸರಾಗಿದ್ದ ಡಾ. ಜಿ. ವಿ. ದಾಸೇಗೌಡ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದರು.

ಮಂಡ್ಯ : ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜಿ. ವಿ. ಡಿ ಎಂಬ ಕಾವ್ಯಾನಾಮದಿಂದ ಹೆಸರಾಗಿದ್ದ ಡಾ. ಜಿ. ವಿ. ದಾಸೇಗೌಡ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದರು. ಅವರ ನಿಧನದಿಂದಾಗಿ ಜಾನಪದ ಕ್ಷೇತ್ರದ ಮತ್ತೊಂದು ಕೊಂಡಿ ಕಳಚಿದಂತಾಗಿದೆ.
ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು. ಮಂಡ್ಯ ನಗರದ ಗುತ್ತಲುವಿನಲ್ಲಿ ಸಂಜೆ ಮೃತರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನೆರವೇರಿತು.
ಪುತ್ರಿ, ಇಬ್ಬರು ಗಂಡು ಮಕ್ಕಳು ಸೇರಿ ಅಪಾರ ಸಾಹಿತ್ಯ ಅಭಿಮಾನಿಗಳನ್ನು ಅಗಲಿರುವ ದಾಸೇಗೌಡರು, ಜಾನಪದ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಕನ್ನಡವಷ್ಟೇ ಅಲ್ಲದೇ, ಇಂಗ್ಲೀಷ್ , ಹಿಂದಿ, ಸಂಸ್ಕೃತ, ಪ್ರಾಕೃತ ಭಾಷೆಗಳನ್ನು ಬಲ್ಲ ಅವರು, ಕನ್ನಡ ಪ್ರಾಧ್ಯಾಪಕರಾಗಿ ಮಂಡ್ಯದ ಕೆ.ಎಂ. ದೊಡ್ಡಿ, ಮಡಿಕೇರಿ, ತುಮಕೂರು, ಮಂಡ್ಯ, ಸರ್ಕಾರಿ ಕಾಲೇಜುಗಳಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


