ರಾಜ್ಯ

ಬೆಂಗಳೂರು: ಸೈಬರ್ ಅಪರಾಧಗಳಿಗೆ ಬಲಿಯಾದವರಲ್ಲಿ ವಿದ್ಯಾವಂತರ ಪ್ರಮಾಣವೇ ಹೆಚ್ಚು!

ನಗರದಲ್ಲಿ ಸೈಬರ್ ಅಪರಾಧ ಗಳಲ್ಲಿ ವಂಚನೆಗೊಳಗಾಗುವ 99% ಸಂತ್ರಸ್ಥರು ಉನ್ನತ ಶಿಕ್ಷಣ ಪದವಿಯನ್ನು ಹೊಂದಿದವರಿರುತ್ತಾರೆ, ಇದರಲ್ಲಿ ಇತ್ಯಂತ ಕಡಿಮೆ ಪ್ರಮಾಣದ ಜನರು ಕಡಿಮೆ....

ಬೆಂಗಳೂರು: ಸೈಬರ್ ಅಪರಾಧಗಳಿಗೆ ಬಲಿಯಾದವರಲ್ಲಿ ವಿದ್ಯಾವಂತರ ಪ್ರಮಾಣವೇ ಹೆಚ್ಚು!
ಸಂಗ್ರಹ ಚಿತ್ರ
Published On :
ಬೆಂಗಳೂರು: ನಗರದಲ್ಲಿ ಸೈಬರ್ ಅಪರಾಧ ಗಳಲ್ಲಿ ವಂಚನೆಗೊಳಗಾಗುವ 99% ಸಂತ್ರಸ್ಥರು ಉನ್ನತ ಶಿಕ್ಷಣ ಪದವಿಯನ್ನು ಹೊಂದಿದವರಿರುತ್ತಾರೆ, ಇದರಲ್ಲಿ ಇತ್ಯಂತ ಕಡಿಮೆ ಪ್ರಮಾಣದ ಜನರು ಕಡಿಮೆ ಆರ್ಥಿಕ ವರಮಾನ ಪಡೆಯುತ್ತಿರುವವರಿದ್ದಾರೆ. ಎಂದು ಸೈಬರ್ ಕ್ರೈಂ ಪೋಲೀಸ್ ಠಾಣೆಯ ವಿವರಗಳು ಹೇಳಿದೆ. ದೂರುದಾರರ ಪೈಕಿ 30 ಪ್ರತಿಶತ ಐಟಿ ವೃತ್ತಿಪರರುಆಗಿದ್ದರೆ ಉಳಿದವರು ದ್ಯಮಿಗಳು, ಚಾರ್ಟರ್ಡ್ ಅಕೌಂಟೆಂಟ್ ಗಳು, ವೈದ್ಯರು ಮತ್ತು ವಿದ್ಯಾರ್ಥಿಗಳು  ಆಗಿದ್ದಾರೆ ಎಂದು  ಸೈಬರ್ ಅಪರಾಧ ಪೊಲೀಸ್ ಠಾಣೆ ಅಧಿಕಾರಿ  ಎಂ.ಚಂದ್ರಪ್ಪ ಹೇಳಿದ್ದಾರೆ.
ಇಲ್ಲಿಯವರೆಗೆ ದಾಖಲಾಗಿರುವ  ಒಟ್ಟು ಸೈಬರ್ ಅಪರಾಧ ಪ್ರಕರಣಗಳು 11,000, ಅದರಲ್ಲಿ 9,000 ಪ್ರಕರಣಗಳು ಸ್ತೇಷನ್ ಮಟ್ಟದಲ್ಲೇ ಬಾಕಿ ಉಳಿದಿವೆ. ಇದರಲ್ಲಿ ಸುಮಾರು 8,000 ಪ್ರಕರಣಗಳಲ್ಲಿ ವಿದ್ಯಾರ್ಥಿಗಳೇ ಬಲಿಪಶುಗಳಾಗಿದ್ದಾರೆ. ಪೊಲೀಸರ ಪ್ರಕಾರ, ಹೆಚ್ಚು ಟೆಕ್ನಾಲಜಿ ಬಗ್ಗೆ ತಿಳಿದಿರುವ  ಜನರು ಆನ್ ಲೈನ್ ನಲ್ಲಿ  ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.ಮುಖ್ಯವಾಗಿ ಅವರು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ದುಷ್ಕರ್ಮಿಗಳು ಹಣವನ್ನು ನೀಡುವಂತೆ ಜನರನ್ನು ಮೋಸಗೊಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. "ನೀವುಗಳೆಂದಿಗೂ ನಿಮ್ಮ ಒಂದು ಬಾರಿ ಬಳಸಬಹುದಾದ ಪಾಸ್ ವರ್ಡ್ (ಒಟಿಪಿ)ಯನ್ನು ಯಾರೊಬ್ಬರೊಡನೆ ಹಂಚಿಕೊಳ್ಲಬೇಡಿ ಎಂದು ಎಲ್ಲೆಡೆ ಸಲಹೆ ನಿಡುತ್ತೇವೆ.ಆದರೆ ಜನರು ಜಾಗೃತರಾಗುತ್ತಿಲ್ಲ. ಉದಾಹರಣೆಗೆ ನೀವು ಏರ್ಲೈನ್ ​​ಅಥವಾ ರೈಲು ಟಿಕೆಟ್ ಅನ್ನು ಬುಕ್ ಮಾಡಲು / ರದ್ದುಗೊಳಿಸಲು ಬಯಸಿದರೆ, ಗ್ರಾಹಕ  ಸೇವಾ ಕೇಂದ್ರಗಳಿಗೆ  ಸಂಪರ್ಕಿಸಲು ವೆಬ್ ಸೈಟ್ ಗೆ ತೆರಳಬೇಕು. ಆದರೆ ಜನರು ಆನ್ ಲೈನ್ ಮೂಲಕ ಅಪರಿಚಿತರೊಡನೆ ತಮ್ಮ ಮಾಹಿತಿ ಹಂಚಿಕೊಳ್ಳುತ್ತಾರೆ,, ಆಗ ಅವರ ಖಾತೆಯಿಂದ ಹಣವನ್ನು ಅಪಘರಿಸುವುದು ಆನ್ ಲೈನ್ ಕಳ್ಳರಿಗೆ ಸುಲಭವಾಗಿದೆ" ಚಂದ್ರಪ್ಪ ಹೇಳಿದ್ದಾರೆ.
ಇತ್ತೀಚಿನ ಸಂದರ್ಭದಲ್ಲಿ, 35 ವರ್ಷ ವಯಸ್ಸಿನ ಐಟಿ ವೃತ್ತಿಪರರು ವೈವಾಹಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದರು. ಆತ ವಿದೇಡದಲ್ಲಿ ಕೆಲಸದಲ್ಲಿದ್ದ ಅಲ್ಲಿ ಆತ ವೈದ್ಯ್ನಾಗಿದ್ದನೆಂದು ನಂಬಿಸಿದ್ದ.. ಕೆಲವು ದಿನಗಳ ನಂತರ ಪರಸ್ಪರ ಸಂದೇಶ ಕಳುಹಿಸಿದ ನಂತರ, ಆತ ಬೆಂಗಳೂರಿಗೆ ಬರುವುದಾಗಿ ಹೇಳಿದ್ದಾನೆ.  ಆ ನಂತರ ಆ  ನಿರ್ದಿಷ್ಟ ದಿನದಂ ಮತ್ತೆ ಕರೆಮಾಡಿದ್ದ ವ್ಯಕ್ತಿ ತಾನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯ ಕೈಯಲ್ಲಿ ಸಿಕ್ಕಿದ್ದೇನೆ. ನನ್ನ ಬಳಿಯಿರುವ ಅಮೂಲ್ಯ ವಸ್ತುಗಳನ್ನು ಬಿಡಿಸಿಕೊಳ್ಲಲು ತಕ್ಷಣ ಹಣ ಬೇಕಿದೆ, ಎಂದಿದ್ದಾನೆ. ಆಕೆ ತಕ್ಷಣ ನಂಬಿ ಅವನ ಖಾತೆಗೆ 33 ಲಕ್ಷ ಹಣ ವರ್ಗಾಯಿಸಿದ್ದಾಳೆ.ಆದರೆ ಇದಾಗಿ ಕೆಲ ಸಮಯದ ಬಳಿಕ ಆ ವ್ಯಕ್ತಿಯ ಕರೆ ಸಿಕ್ಕದಿದ್ದಾಗ ಮತ್ತೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದ ಆಕೆ ಪೋಲೀಸರಿಗೆ ದೂರಿದ್ದಾಳೆ.
ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮ ಮತ್ತು ಸೈಟ್ ಗಳಲ್ಲಿ ಹೆಚ್ಚು ಅವಕಾಶವಿದೆ, ಆದರೆ ಅಲ್ಲಿಯೇ ಹೆಚ್ಚು ಮೋಸ, ವಂಚನೆ ನಡೆಯುತ್ತಿದೆ. ನಕಲಿ ಗುರುತಿನ ಚೀಟಿ ಸೃಷ್ಟಿಸುವ ಮೂಲಕ ಮತ್ತು ಕಡಿಮೆ ಬೆಲೆಗೆ ತಮ್ಮ ವಾಹನಗಳನ್ನು ಮಾರಲು ಬಯಸುತ್ತಿರುವ ನಾಟಕವಾಡಿ ವಂಚಕರು ಮೋಸ ನಡೆಸುತ್ತಾರೆ ಎಂದು ಪೋಲೀಸರು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.