ತುಮಕೂರು: ನಡು ಬೀದಿಯಲ್ಲೇ ಜೆಡಿಎಸ್ ಕಾರ್ಪೋರೇಟರ್ ಭೀಕರ ಕೊಲೆ
ಖಾರದ ಪುಡಿ ಕಣ್ಣಿಗೆರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

Published On :
ತುಮಕೂರು: ಖಾರದ ಪುಡಿ ಕಣ್ಣಿಗೆರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆ ತುಮಕೂರಿನ ಬಟವಾಡಿ ಬ್ರಿಡ್ಜ್ ಸಮೀಪ ನಡೆದ ಘಟನೆಯಲ್ಲಿ ತುಮಕೂರು ನಗರ ಪಾಲಿಕೆ ಸದಸ್ಯ ಎಚ್.ರವಿಕುಮಾರ್ ಸಾವನ್ನಪ್ಪಿದ್ದಾರೆ.
ಬೆಳಿಗ್ಗೆ ಎದ್ದು ಮನೆ ಸಮೀಪದ ಕ್ಯಾಂತೀನ್ ನಲ್ಲಿ ಟೀ ಕುಡುಯುವಾಗ ಳೆ ಟಾಟಾ ಏಸ್‌ನಲ್ಲಿ ಬಂದ 7 ಜನ ದುಷ್ಕರ್ಮಿಗಳು ರವಿಕುಮಾರ ಅವರ ಮೇಲೆ ಖಾರದ ಪುಡಿ ಎರಚಿದ್ದಾರೆ.ಬಳಿಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ರವಿಕುಮಾರ್ ಅವರ ತಲೆ ಭಾಗಕ್ಕೆ ಬಲವಾಗಿ ಹೊಡೆದು ಕೊಲ್ಲಲಾಗಿದೆ.
ಕಾರಿನಲ್ಲಿದ್ದ ಏಳು ಜನರ ಪೈಕಿ ಐವರು ಕೆಳಗಿಳಿದು ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದುಷ್ಕರ್ಮಿಗಳು ರವಿಕುಮಾರ ಜತೆಗಿದ್ದ ಟೈಲರ್ ಕಿಟ್ಟಣ್ಣ ಎನ್ನ್ನುವವರ ಮೇಲೆ ಸಹ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಕಿಟ್ಟಣ್ನ ಸ್ಥಳದಿಂದ ತಪ್ಪಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ರವಿಕುಮಾರ್ ತುಮಕೂರು [ಪ್ರದೇಶದಲ್ಲಿ ಪ್ರಭಾವಿ ನಾಯಕರಾಗಿದ್ದರು. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಗಳಿಸಿದ್ದಲ್ಲದೆ ಅಮಾಜಿ ಮೇಯರ್ ಸಹ ಆಗಿದ್ದರು,
ಹಂತಕರು ಯಾರು, ಹತ್ಯೆಗೆ ಕಾರಣವೇನು ಎನ್ನುವುದು ತನಿಖೆಯಿಂದ ಇನ್ನಷ್ಟೇ ಬಹಿರಂಗವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


