ರಾಜ್ಯ

ಬೆಂಗಳೂರು: ಅಡುಗೆ ಅನಿಲ ಸ್ಟೋಟ: ಕಟ್ಟಡ ಕುಸಿತದಿಂದ ನಾಲ್ವರಿಗೆ ಗಾಯ !

ಅಡುಗೆ ಅನಿಲ ಸೋರಿಕೆಯಿಂದ ಕಟ್ಟಡ ಧ್ವಂಸಗೊಂಡು ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಕೆಜಿ ಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಅಡುಗೆ  ಅನಿಲ ಸ್ಟೋಟ: ಕಟ್ಟಡ ಕುಸಿತದಿಂದ ನಾಲ್ವರಿಗೆ  ಗಾಯ !
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಅಡುಗೆ ಅನಿಲ ಸ್ಟೋಟದಿಂದ  ಕಟ್ಟಡ ಧ್ವಂಸಗೊಂಡು ಒಂದೇ ಕುಟುಂಬದ ನಾಲ್ವರು  ಗಾಯಗೊಂಡಿರುವ ಘಟನೆ  ಕೆಜಿ ಹಳ್ಳಿಯಲ್ಲಿ ನಡೆದಿದೆ.

ಗಾಯಾಳುಗಳನ್ನು  ಚಂದ್ ಪಾಶ (71) ಆತನ ಪತ್ನಿ ಸಮ್ರತಾ (60) ಹಾಗೂ ಅವರ ಕುಟುಂಬದ ಸದಸ್ಯರಾದ ಅಂಜುಮ್ (17) ಮತ್ತು ರಫೀಕ್ (38) ಎಂದು ಗುರುತಿಸಲಾಗಿದೆ.

 ಕುಟುಂಬದ ಸದಸ್ಯರೆಲ್ಲರೂ ಇನ್ನೂ ನಿದ್ರೆಯಲ್ಲಿರುವಾಗ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡುಗೆ ಅನಿಲ ಸೋರಿಕೆಯಿಂದಾಗಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಭಾರೀ ಶಬ್ದ ಉಂಟಾಗಿದೆ.  ಸುತ್ತಮುತ್ತಲಿನವರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಲಾಗಿ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ  ಗಾಯಾಳುಗಳನ್ನು  ರಕ್ಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.