ದುನಿಯಾ ವಿಜಯ್ ಹಲ್ಲೆಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಗಾಯಾಳು ಮಾರುತಿ ಗೌಡ!
ಸ್ಯಾಂಡಲ್ವುಡ್ ನ ಕರಿ ಚಿರತೆ ಎಂದೇ ಖ್ಯಾತರಾಗಿರುವ ನಟ ದುನಿಯಾ ವಿಜಯ್ ಇದೀಗ ನಿಜ ಜೀವನದಲ್ಲಿ ಮಾರುತಿ ಗೌಡ ಎಂಬಾತನಿಗೆ ವಿಲನ್ ಆಗಿದ್ದಾರೆ...

Published On :
ಬೆಂಗಳೂರು: ಸ್ಯಾಂಡಲ್ವುಡ್ ನ ಕರಿ ಚಿರತೆ ಎಂದೇ ಖ್ಯಾತರಾಗಿರುವ ನಟ ದುನಿಯಾ ವಿಜಯ್ ಇದೀಗ ನಿಜ ಜೀವನದಲ್ಲಿ ಮಾರುತಿ ಗೌಡ ಎಂಬಾತನಿಗೆ ವಿಲನ್ ಆಗಿದ್ದಾರೆ.
ಹೌದು ಮಾರುತಿ ಗೌಡ ಎಂಬಾತನನ್ನು ಅಪಹರಿಸಿದ ದುನಿಯಾ ವಿಜಯ್ ತನ್ನ ಜೊತೆಗಾರರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ಮಾರುತಿ ಗೌಡ ರಾತ್ರಿ ನಡೆದ ಘಟನೆ ಕುರಿತಂತೆ ವಿವರವಾಗಿ ಬಿಚ್ಚಿಟ್ಟಿದ್ದಾನೆ. ಯಾರ್ಯಾರು ತಮ್ಮನ್ನು ಅಪಹರಿಸಿದ್ರು? ಹಲ್ಲೆ ನಡೆಸಿದರವರ್ಯಾರು? ಎಂಬೆಲ್ಲಾ ಮಾಹಿತಿಯನ್ನು ಮಾಧ್ಯಮವೊಂದರ ಮುಂದೆ ಹೊರಹಾಕಿದ್ದಾರೆ.
ಕಳೆದ ರಾತ್ರಿ ತಮ್ಮನ್ನು ದುನಿಯಾ ವಿಜಯ್ ಹಾಗೂ ಅವರ ತಂಡ ನಮ್ಮನ್ನು ಅಪಹರಿಸಿ ಕಾರಿನಲ್ಲಿ ಸುಮಾರು 1.45 ಗಂಟೆ ಕಾಲ ರಸ್ತೆಗಳಲ್ಲೆ ಸುತ್ತಾಡಿಸಿ ನನ್ನ ಮೇಲೆ ಹಲ್ಲೆ ನಡೆಸಿದರು. ನಂತರ ರಸ್ತೆ ಮಧ್ಯೆ ಪೊಲೀಸರು ತಮ್ಮ ಕಾರನ್ನು ಅಡ್ಡಹಾಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು ಎಂದು ಮಾರುತಿ ಹೇಳಿದ್ದಾರೆ.
ಹಲ್ಲೆಯಲ್ಲಿ ಮಾರುತಿ ಗೌಡ ಅವರ ಮುಖಕ್ಕೆ ಗಾಯಗಳಾಗಿದ್ದು ತುಟಿ ಸೀಳು ಬಿಟ್ಟಿದ್ದು ವೈದ್ಯರು ಹೊಲಿಗೆ ಹಾಕಿದ್ದಾರೆ. ಇನ್ನು ನೋವಿನಿಂದ ಮಾರುತಿ ಗೌಡ ಮಾತನಾಡಲು ಸಾಧ್ಯವಾಗುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruCrimeದುನಿಯಾ ವಿಜಿduniya vijayಅಪರಾಧHigh Grounds Police StationPanipuri Kittyಹೈಗ್ರೌಂಡ್ಸ್ ಪೊಲೀಸ್ ಠಾಣೆಪಾನಿಪುರಿ ಕಿಟ್ಟಿMaruthi Gowdaಮಾರುತಿ ಗೌಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


