5ನೇ ಮಹಡಿಯಿಂದ ಬಿದ್ದು ವೈದ್ಯನ ಪತ್ನಿ ಸಾವು, ಒಳ ಉಡುಪಿನಲ್ಲಿ ಚಿನ್ನಾಭರಣ, ನಗದು ಪತ್ತೆ!
ಮಂತ್ರಿ ಅಲ್ಪೈನ್ ಅಪಾರ್ಟ್'ಮೆಂಟ್ ನ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು....

Published On :
ಬೆಂಗಳೂರು: ಮಂತ್ರಿ ಅಲ್ಪೈನ್ ಅಪಾರ್ಟ್'ಮೆಂಟ್ ನ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಒಳ ಉಡುಪಿನಲ್ಲಿ ಚಿನ್ನಾಭರಣ, ನಗದು ಹಾಗೂ ಪಕ್ಕದ ಫ್ಲ್ಯಾಟ್ ನ ಕೀ ಪತ್ತೆಯಾಗಿದೆ.
ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮಂತ್ರಿ ಅಲ್ಪೈನ್ ಅಪಾರ್ಟ್ ಮೆಂಟ್ ನಿವಾಸಿ ಸೋನಾಲ್ ಅಗರ್ವಾಲ್ (26) ಅವರು ಭಾನುವಾರ ರಾತ್ರಿ ಪಕ್ಕದ ಫ್ಲ್ಯಾಟ್ ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದು, ಇದು ಆತ್ಮಹತ್ಯೆಯಲ್ಲ. ಕೊಲೆ ಎಂದು ಆಕೆಯ ಪತಿ ವೈದ್ಯ ಅವಿನಾಶ್ ಅವರು ಆರೋಪಿಸಿದ್ದಾರೆ.
ಸೋನಾಲ್ ಪತಿ ಅವಿನಾಶ್ ಮತ್ತು 3 ವರ್ಷದ ಮಗುವಿನ ಜೊತೆ ಮಂತ್ರಿ ಅಲ್ಪೈನ್ ಅಪಾರ್ಟ್'ಮೆಂಟ್'ನ 5ನೇ ಮಹಡಿಯಿಲ್ಲಿ 505ರ ಫ್ಲ್ಯಾಟ್ ನಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಸೋನಾಲ್ 501ನ ಫ್ಲ್ಯಾಟ್'ಗೆ ತೆರಳಿದ್ದರು. ಈ ವೇಳೆ 501ನ ಫ್ಲ್ಯಾಟ್'ನಲ್ಲಿದ್ದ ಕುಟುಂಬ ಹೊರಗೆ ಹೋಗಿತ್ತು.
ಸಂಜೆ 7.30ರ ಸುಮಾರಿಗೆ 501 ಫ್ಲ್ಯಾಟ್'ನಲ್ಲಿ ವಾಸವಿದ್ದ ಕುಟುಂಬ ಮನೆಗೆ ಬಂದಿದೆ. ಫ್ಲ್ಯಾಟ್ ಮಾಲೀಕರನ್ನು ನೋಡಿದ ಕೂಡಲೇ ಸೋನಾಲ್ ಅಗರ್ವಾಲ್ ಫ್ಲ್ಯಾಟ್ ಒಳಗಡೆಯಿಂದ ಲಾಕ್ ಮಾಡಿಕೊಂಡು ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವವಾಗಿ ಸೋನಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಚ್ಚರಿ ಎಂದರೆ ಅವರ ಒಳ ಉಡುಪಿನಲ್ಲಿ ಚಿನ್ನದ ಸರ, ನಗದು ಹಾಗೂ ನಮ್ಮ ಫ್ಲ್ಯಾಟ್ ನ ಕೀ ಪತ್ತೆಯಾಗಿದೆ ಎಂದು 501 ಫ್ಲ್ಯಾಟ್ ನಿವಾಸಿ ಪ್ರಸಾದ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪ್ರಸಾದ್ ಅವರು 501ನೇ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದು, ಅವರ ಫ್ಲ್ಯಾಟ್ ಗೆ ಸೋನಾವ್ ಏಕೆ ಹೋಗಿದ್ದರು ಎಂಬುದನ್ನು ನಾವು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಪ್ರಸಾದ್ ಅವರ ಮನೆಯ ಕೀ ಕಳೆದು ಹೋಗಿತ್ತು. ಮಕ್ಕಳು ಎಲ್ಲಾದರೂ ಕೀ ಬಿಸಾಡಿರಬಹುದು ಎಂದು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಭಾನುವಾರ ಸಂಜೆ ನೆಲ ಮಹಡಿಯಲ್ಲಿ ಗಣೇಶ ಉತ್ಸವ ನಡೆಯುತ್ತಿತ್ತು. ಪ್ರಸಾದ್ ಮತ್ತು ಆತನ ಕುಟುಂಬ ಕೆಳಗೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಸೋನಾಲ್ ಕಳೆದುಕೊಂಡ ಕೀ ಬಳಸಿ ಪ್ರಸಾದ್ ಅವರ ಫ್ಲ್ಯಾಟ್ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ನಾವು ಸೋನಾಲ್ ಮತ್ತು ಅವರ ಪತಿಯ ಫೋನ್ ಕಾಲ್ ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಏಕೆ ಬೇರೊಬ್ಬರ ಫ್ಲ್ಯಾಟ್'ಗೆ ತೆರಳಿದ್ದರು, ಫ್ಲ್ಯಾಟ್'ನಲ್ಲಿ ಬೇರೆ ಯಾರಾದರೂ ಇದ್ದರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


