ರಾಜ್ಯ

ಬೆಂಗಳೂರು: 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಅಪಾರ್ಟ್'ಮೆಂಟ್ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಉತ್ತರಹಳ್ಳಿಯಲ್ಲಿ ನಡೆದಿದೆ...

ಬೆಂಗಳೂರು: 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ಸಂಗ್ರಹ ಚಿತ್ರ
Published On :
ಬೆಂಗಳೂರು: ಅಪಾರ್ಟ್'ಮೆಂಟ್ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಉತ್ತರಹಳ್ಳಿಯಲ್ಲಿ ನಡೆದಿದೆ.
ಉತ್ತರಹಳ್ಳಿ ನಿವಾಸಿ ಸೋನಾಲ್ ಅಗರ್ವಾಲ್ (25) ಮೃತ ಮಹಿಳೆ ಎಂದು ಹೇಳಲಾಗುತ್ತಿದೆ. ಸೋನಾಲ್ ಪತಿ ಅವಿನಾಶ್ ಮತ್ತು 3 ವರ್ಷದ ಮಗುವಿನ ಜೊತೆ ಮಂತ್ರಿ ಅಲ್ಪೈನ್ ಅಪಾರ್ಟ್'ಮೆಂಟ್'ನ 5ನೇ ಮಹಡಿಯಿಲ್ಲಿ 505ರ ಫ್ಲ್ಯಾಟ್ ನಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಸೋನಾಲ್ 501ನ ಫ್ಲ್ಯಾಟ್'ಗೆ ತೆರಳಿದ್ದರು. ಈ ವೇಳೆ 501ನ ಫ್ಲ್ಯಾಟ್'ನಲ್ಲಿದ್ದ ಕುಟುಂಬ ಹೊರಗೆ ಹೋಗಿತ್ತು. 
ಸಂಜೆ 7.30ರ ಸುಮಾರಿಗೆ 501 ಫ್ಲ್ಯಾಟ್'ನಲ್ಲಿ ವಾಸವಿದ್ದ ಕುಟುಂಬ ಮನೆಗೆ ಬಂದಿದೆ. ಫ್ಲ್ಯಾಟ್ ಮಾಲೀಕರನ್ನು ನೋಡಿದ ಕೂಡಲೇ ಸೋನಾಲ್ ಅಗರ್ವಾಲ್ ಐದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವವಾಗಿ ಸೋನಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 
ಸ್ಥಳಕ್ಕೆ ಧಾವಿಸಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪಲಿಶೀಲನೆ ನಡೆಸಿದಾಗ, ಸೋನಾಲಿ ಅವರ ಒಳ ಉಡುಪಿನಲ್ಲಿ ಮೊಬೈಲ್ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಸೋನಾಲ್ ಬಳಿ ಕೀಯೊಂದು ಪತ್ತೆಯಾಗಿದೆ. ಏಕೆ ಬೇರೊಬ್ಬರ ಫ್ಲ್ಯಾಟ್'ಗೆ ತೆರಳಿದ್ದರು, ಫ್ಲ್ಯಾಟ್'ನಲ್ಲಿ ಬೇರೆ ಯಾರಾದರೂ ಇದ್ದರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.