ಜಾಹೀರಾತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಬಿಬಿಎಂಪಿಗೆ ಹೈಕೋರ್ಟ್ ತಡೆ
ಒಂದು ವರ್ಷಗಳ ಅವಧಿಗೆ ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿ ನಿರ್ಣಯ ಹೊರಡಿಸಿರುವ ...

ಬೆಂಗಳೂರು: ಒಂದು ವರ್ಷಗಳ ಅವಧಿಗೆ ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿ ನಿರ್ಣಯ ಹೊರಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಹೀರಾತುದಾರರ ವಿರುದ್ಧ ಯಾವುದೇ ಪ್ರಚೋದನಾಕಾರಿ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ.
ಜಾಹೀರಾತುದಾರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ನರೇಂದರ್ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಈ ಅರ್ಜಿಯನ್ನು ಮುಖ್ಯ ನ್ಯಾಯಾಧೀಶರ ಮುಂದೆ ಸೂಕ್ತ ಆದೇಶ ಬರಲು ಇಡಬೇಕೆ ಎಂಬುದರ ಬಗ್ಗೆ ಪರಿಶೀಲಿಸುವಂತೆ ನ್ಯಾಯಾಧೀಶರು ರಿಜಿಸ್ಟ್ರಾರ್ ಗೆ ಹೇಳಿದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಪ್ಪ, ಮುಖ್ಯ ನ್ಯಾಯಮೂರ್ತಿಗಳು ಅನಧಿಕೃತ ಹೋರ್ಡಿಂಗ್ ಗಳು, ಬಂಟಿಂಗ್ಸ್, ಫ್ಲೆಕ್ಸ್ ಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ ನಂತರ ನ್ಯಾಯಾಧೀಶರು ಇದನ್ನು ಸೂಚಿಸಿದರು.
ಪೆಸಿಫಿಕ್ ಜಾಹೀರಾತು ಮತ್ತು ಇತರ ಅರ್ಜಿದಾರರು, ಬಿಬಿಎಂಪಿಯಿಂದ ಅನುಮತಿ ಪಡೆದುಕೊಂಡು ಕಬ್ಬಿಣದ ಕಂಬ ನಿಲ್ಲಿಸಿ ಅದರಲ್ಲಿ ಹೋರ್ಡಿಂಗ್ ಗಳನ್ನು ಪ್ರದರ್ಶಿಸುತ್ತಿದ್ದೇವೆ. 2006ರ ಬೈಲಾದ ಪ್ರಕಾರ ಜಾಹೀರಾತುಗಳಿಗೆ ನಿಷೇಧ ಹೇರಿ ಬಿಬಿಎಂಪಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಬಿಬಿಎಂಪಿ ಕಳೆದ ತಿಂಗಳು 6 ನೀಡಿದ್ದ ಆದೇಶದಲ್ಲಿ ಒಂದು ವರ್ಷಗಳ ಅವಧಿಗೆ ಎಲ್ಲಾ ರೀತಿಯ ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿತ್ತು. ಆ ನಂತರ ಬಿಬಿಎಂಪಿ ಆಗಸ್ಟ್ 27ರಂದು ಜಾಹೀರಾತು ಸಂಸ್ಥೆಗಳಿಗೆ ನೊಟೀಸ್ ಕಳುಹಿಸಿ ಕೆಲವು ಜಾಹೀರಾತು ಕಂಪೆನಿಗಳು ಅನುಮತಿ ಪಡೆಯದೆ ಪ್ರದರ್ಶನ ಮಾಡಿರುವುದರಿಂದ ಅವುಗಳನ್ನು ತೆಗೆದುಹಾಕಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


