ಕುದುರೆಗಾಡಿ ಓಟದಲ್ಲಿ ಆಯಾ ತಪ್ಪಿ ಕೆಳಗೆ ಬಿದ್ದ ಸವಾರ ಸಾವು, ಭೀಕರ ವಿಡಿಯೋ!
ರಾಜ್ಯದ ಕಲಘಟಗಿ ತಾಲೂಕಿನ ಬೂದನಗುಡ್ಡ ಗ್ರಾಮದ್ದು ಎನ್ನಲಾದ ಕುದುರೆ ಗಾಡಿ ಓಟದ ಸ್ಪರ್ಧೆಯಲ್ಲಿ ಸವಾರನೊಬ್ಬ ಗಾಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

Published On :
ಹುಬ್ಬಳ್ಳಿ: ರಾಜ್ಯದ ಕಲಘಟಗಿ ತಾಲೂಕಿನ ಬೂದನಗುಡ್ಡ ಗ್ರಾಮದ್ದು ಎನ್ನಲಾದ ಕುದುರೆ ಗಾಡಿ ಓಟದ ಸ್ಪರ್ಧೆಯಲ್ಲಿ ಸವಾರನೊಬ್ಬ ಗಾಡಿಯಿಂದ ಕೆಳಗೆ ಬಿಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಕುದರೆಗಾಡಿ ಓಟದ ಸ್ಪರ್ಧೆ ಬಸವಣ್ಣ ದೇವರ ಜಾತ್ರೆ ವೇಳೆ ನಡೆದಿದೆ ಎನ್ನಲಾಗಿದೆ. ಕೊನೆ ಶ್ರಾವಣ ಸೋಮವಾರದ ಪ್ರಯುಕ್ತ ನಿನ್ನೆ ಬೂದನಗುಡ್ಡದಲ್ಲಿ ಜಾತ್ರಾ ಮಹೋತ್ಸವದ ವೇಳೆ ಬೈಕ್ ಮತ್ತು ಜಟಕಾ ಬಂಡಿ ಸ್ಪರ್ಧೆಯನ್ನು ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಕುದುರೆ ಗಾಡಿಯಿಂದ ಬಿದ್ದ ಸವಾರ ಸ್ಧಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಘಟನೆ ನಡೆದಿದ್ದೇಲಿ ಎಂಬ ಕುರಿತು ಚರ್ಚೆ ಶುರುವಾಗಿದೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿಜಯ್ ಎಂಬುವರು ಈ ವಿಡಿಯೋ ಇಲ್ಲಿಯದಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಬೇರೆ ಎಲ್ಲೋ ನಡೆದ ಘಟನೆಯನ್ನು ಕಲಘಟಗಿ ತಾಲೂಕಿನಲ್ಲಿ ನಡೆದಿದೆ ಎಂದು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಹೇಳಿದ್ದು ಸದ್ಯಕ್ಕೆ ಈ ಭೀಕರ ವಿಡಿಯೋ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


