ರಾಜ್ಯ

ರಫೇಲ್ ಡೀಲ್ ಎಲ್ಲಾ ರಕ್ಷಣಾ ಹಗರಣಗಳ ಮಹಾತಾಯಿ: ಪ್ರಶಾಂತ್ ಭೂಷಣ್

ರಫೇಲ್ ಯುದ್ದ ವಿಮಾನ ಖರೀದಿ ಮಹಾಮೋಸ, ಇದು ದೇಶದ ರಕ್ಷಣಾ ಹಗರಣಗಳ ಮಹಾತಾಯಿ, ಇದಕ್ಕೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ...

ರಫೇಲ್ ಡೀಲ್ ಎಲ್ಲಾ ರಕ್ಷಣಾ ಹಗರಣಗಳ ಮಹಾತಾಯಿ: ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್
Published On :
ಬೆಂಗಳೂರು: ರಫೇಲ್ ಯುದ್ದ ವಿಮಾನಗ ಖರೀದಿ ಮಹಾ ಮೋಸ,  ಇದು ದೇಶದ ರಕ್ಷಣಾ ಹಗರಣಗಳ ಮಹಾತಾಯಿ, ಇದಕ್ಕೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಜವಾಬ್ದಾರಿ ಎಂದು ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ರಫೇಲ್ ಡೀಲ್ ನಲ್ಲಿ ವಿಮಾನಗಳ ಸಂಖ್ಯೆಯಲ್ಲಿ ಬದಲಾವಣೆ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ, ಇದರಲ್ಲಿ ಉದ್ಯಮಿ ಅನಿಲ್ ಅಂಬಾನಿ ಪ್ರಮುಖ ಪಾತ್ರ ವಹಿಸಿದ್ದಾರೆ.
2015ರಲ್ಲಿ ಮೋದಿ ಫ್ರಾನ್ಸ್ ಗೆ ಹೋಗಿ ಮಾತುಕತೆ ನಡೆದ ಬಳಿಕ, 126 ವಿಮಾನಗಳ ಬದಲಿಗೆ ಪೂರ್ಣ ಪ್ರಮಾಣದ 36 ಯುದ್ದ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇದಕ್ಕೆ ಹೆಚ್ಚುವರಿ ಹಣ ನೀಡಿದ್ದು ಹಣಕಾಸು ಸಚಿವ ಅರುಣ್ ಜೈಟ್ಲಿ ನೀಡಿದ್ದರು. ಇದಕ್ಕಾಗಿ ಅವರು ಯಾವುದೇ ಟೆಂಡರ್ ಕರೆದಿರಲಿಲ್ಲ.  ನಂತರ ಅನಿಲ್ ಅಂಬಾನಿಗೆ 21 ಸಾವಿರ ಕೋಟಿ ಏಕೆ ನೀಡಲಾಗಿದೆ, ಇದರ ಹೊರತಾಗಿಯೂ ರಿಲಾಯನ್ಸ್ ಒಂದೇ ಒಂದು ಭಾಗವನ್ನು ಉತ್ಪಾದನೆ ಮಾಡಲಿಲ್ಲ. 
ಬೋಫೋರ್ಸ್ ಹಗರಣದಲ್ಲಿ ಕೇವಲ 64 ಕೋಟಿ ಕಮಿಷನ್ ನಡೆದಿತ್ತು, ಇದರಲ್ಲಿ 400 ಪಟ್ಟು ಅಧಿಕ ಕಮಿಷನ್ ಇದೆ. ಇದೊಂದು ಎಲ್ಲಾ ಹಗರಣಗಳ ಮಹಾತಾಯಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.