ರಾಜ್ಯ

ಬೆಂಗಳೂರು: ಬಿಟ್'ಕಾಯಿನ್ ಎಟಿಎಂ ತೆರೆದಿದ್ದ ಆರೋಪಿ ಬಂಧನ

ದೇಶದಲ್ಲಿ ಇದೇ ಮೊದಲ ಬಾರಿಗೆ ಕಾನೂನು ಬಾಹಿರವಾಗಿ ಬಿಟ್ ಕಾಯಿನ್ ಎಟಿಎಂ ತೆರೆದಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ...

ಬೆಂಗಳೂರು: ಬಿಟ್'ಕಾಯಿನ್ ಎಟಿಎಂ ತೆರೆದಿದ್ದ ಆರೋಪಿ ಬಂಧನ
ಸಂಗ್ರಹ ಚಿತ್ರ
Published On :
ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ಕಾನೂನು ಬಾಹಿರವಾಗಿ ಬಿಟ್ ಕಾಯಿನ್ ಎಟಿಎಂ ತೆರೆದಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 
ತುಮಕೂರಿನ ಜಯನಗರ ನಿವಾರಿ ಬಿ.ವಿ.ಹರೀಶ್ (37) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ ಪೊಲೀಸರು ಎರಡು ಲ್ಯಾಪ್ ಟಾಪ್, ಮೊಬೈಲ್, 2 ಕ್ರೆಡಿಟ್ ಕಾರ್ಡ್, 5 ಡೆಬಿಟ್ ಕಾರ್ಡ್, ಪಾಸ್ ಪೋರ್ಟ್, 5 ಕಂಪನಿ ಸೀಲ್, ಕ್ರಿಪ್ಟೋ ಕರೆನ್ಸಿಯ (ಡಿಜಿಟಲ್ ಕರೆನ್ಸಿ) ಡಿವೈಎಸ್ ಹಾಗೂ ರೂ.1.79 ಲಕ್ಷ ವಶಕ್ಕೆ ಪಡೆದುಕೊಂಡಿದ್ದಾರೆ. 
ಬಂಧಿತ ಆರೋಪಿ ರಾಜಾಜಿನಗರ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಯೂನೊಕಾಯಿನ್ ಟೆಕ್ನಾಲಜಿಸ್ ಪ್ರೈ.ಲಿ.ಕಂಪನಿ ತೆರೆದು ಡಿಜಿಟಲ್ ಕರೆನ್ಸಿ ಮೂಲಕ ವ್ಯವಹಾರ ನಡೆಸುತ್ತಿದ್ದ. ಭಾರತದಲ್ಲಿ ಬಿಟ್ ಕಾಯಿನ್ ವ್ಯವಹಾರಕ್ಕೆ ಅನುಮತಿ ಇಲ್ಲ. ಅಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ ಗಳಿಗೆ ಬಿಟ್ ಕಾಯಿನ್ ಸೇರಿ ಡಿಜಿಟಲ್ ಕರೆನ್ಸಿ ವ್ಯವಹಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. 
ಇತ್ತ ಹರೀಶ್ ಅಕ್ರಮವಾಗಿ ಕೆಂಪ್ ಪೋರ್ಟ್ ಮಾಲ್ ನಲ್ಲಿ ಎಟಿಎಂ ತೆರೆದಿದ್ದ. ಇದರಲ್ಲಿ ಯೂನೊಕಾಯಿನ್ ಮತ್ತು ಯೂನೊಡಕ್ಸ್ ಗ್ರಾಹಕರಿಗೆ ಈ ಎಟಿಎಂನಲ್ಲಿ ಹಣ ಜಮೆ ಮತ್ತು ವಿತ್ ಡ್ರಾಗೆ ಅವಕಾಶ ಕಲ್ಪಿಸಿದ್ದ. ಎಟಿಎಂ ನಲ್ಲಿ ಮನವಿ ಸಲ್ಲಿಸಿದಾಗ ಮೊಬೈಲ್'ಗೆ ಒಟಿಪಿ ನಂಬರ್ ಬರುತ್ತದೆ. ಅದನ್ನು ನಮೂದಿಸಿ ಭಾರತೀಯ ಕರೆನ್ಸಿಯನ್ನು ಯೂನೊಕಾಯಿನ್ ಅಥವಾ ಯೂನೊಡಕ್ಸ್'ಗೆ ಜಮೆ ಮಾಡಬಹುದು. ಜಮೆ ಮಾಡಿದ ಮೊತ್ತಕ್ಕೆಬಿಟ್ ಕಾಯಿನ್ ಪಡೆಯಬಹುದು. 
ಮೊಬೈಲ್ ಅಥವಾ ಆ್ಯಪ್ ನಲ್ಲಿ ಕೋರಿಕೆ ಸಲ್ಲಿಸಿದ ಬಳಿಕ ಸಿಗುವ 12 ಅಂಕಿಗಳ ಪಾಸ್ ವರ್ಡ್ ನಮೂದಿಸಿ ವಿತ್ ಡ್ರಾಗೆ ಅವಕಾಶ ಕಲ್ಪಿಸಿ ಈ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.